Thursday, September 18, 2025
Flats for sale
Homeರಾಜ್ಯಬೆಂಗಳೂರು : ಕಲ್ಲಂಗಡಿ ಹಣ್ಣಿಗೆ ಹೆಚ್ಚಾದ ಬೇಡಿಕೆ, ಮದ್ಯವರ್ತಿಗಳಿಂದ ಕೃತಕ ಕೆಂಪು ಬಣ್ಣದ ಕೆಮಿಕಲ್ ಮಿಶ್ರಣ,ವಿಶೇಷ...

ಬೆಂಗಳೂರು : ಕಲ್ಲಂಗಡಿ ಹಣ್ಣಿಗೆ ಹೆಚ್ಚಾದ ಬೇಡಿಕೆ, ಮದ್ಯವರ್ತಿಗಳಿಂದ ಕೃತಕ ಕೆಂಪು ಬಣ್ಣದ ಕೆಮಿಕಲ್ ಮಿಶ್ರಣ,ವಿಶೇಷ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆ..!

ಬೆಂಗಳೂರು : ಬೇಸಿಗೆ ಕಾಲವು ಸುಡುವ ಶಾಖ, ಬೆವರು ಮತ್ತು ತೇವಾಂಶದ ಸಮೃದ್ಧಿಯೊಂದಿಗೆ ಬರುತ್ತದೆ, ಆದರೆ ನಮ್ಮ ಬಾಯಾರಿಕೆಯನ್ನು ಪೂರೈಸುವ ಮತ್ತು ನಮ್ಮ ಕಳೆದುಹೋದ ಶಕ್ತಿಯನ್ನು ಮರುಪೂರಣಗೊಳಿಸಲು ಸಹಾಯ ಮಾಡುವ ಮಾವಿನಹಣ್ಣು ಮತ್ತು ಕಲ್ಲಂಗಡಿಗಳ ಉಡುಗೊರೆಗಾಗಿ ದೇವರಿಗೆ ಧನ್ಯವಾದಗಳು. ಆದರೆ ನೀವು ಸೇವಿಸುವ ಬೇಸಿಗೆಯ ಹಣ್ಣುಗಳು ಕಲಬೆರಕೆಯಾಗುತ್ತಿರುವುದು ಕೇದಕರ. ಮಾವಿನಹಣ್ಣುಗಳು ವೇಗವಾಗಿ ಹಣ್ಣಾಗಲು ಕಾರ್ಬೈಡ್‌ನೊಂದಿಗೆ ಕಲಬೆರಕೆ ಮಾಡಿರುವುದು ನಿಮಗೆ ತಿಳಿದಿದೆ, ಆದರೆ ಕಲ್ಲಂಗಡಿಯನ್ನು ಸಿಹಿಗೊಳಿಸಲು ಮತ್ತು ಅದಕ್ಕೆ ಸುಂದರವಾದ ಕೆಂಪು ಬಣ್ಣ, ಕೃತಕ ಆಹಾರ ಬಣ್ಣ ಮತ್ತು ಸಿಹಿಕಾರಕಗಳನ್ನು ಚುಚ್ಚಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

ಯೂಟ್ಯೂಬ್ ಚಾನೆಲ್ ದಿ ಸೋಶಿಯಲ್ ಜಂಕ್ಷನ್‌ನಲ್ಲಿ ಪೋಸ್ಟ್ ಮಾಡಿದ ಕ್ಲಿಪ್ ಈ ಪ್ರಯೋಗದ ಭಾಗವಾಗಿ ಮುಖವಾಡದ ವ್ಯಕ್ತಿಯೊಬ್ಬ ಕಲ್ಲಂಗಡಿಗೆ ರಾಸಾಯನಿಕಗಳನ್ನು ಚುಚ್ಚುತ್ತಿರುವುದನ್ನು ತಿಳಿದುಬಂದಿದೆ. ಒಂದು ದಿನದ ಹಿಂದಷ್ಟೇ ಬೆಂಗಳೂರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದ ಆಹಾರ ಇಲಾಖೆ ಅಧಿಕಾರಿಗಳು, ಹೋಟೆಲ್ ಗಳಲ್ಲಿ ಇಡ್ಲಿಗಳನ್ನು ತಯಾರಿಸುವಾಗ ಪ್ಲಾಸ್ಟಿಕ್ ಶೀಟ್ ಬಳಸುವುದನ್ನು ಪತ್ತೆ ಹಚ್ಚಿ ಅವುಗಳ ಮೇಲೆ ನಿಷೇಧ ಹೇರಲು ತಯಾರಿ ನಡೆಸಿದ್ದಾರೆ. ಇದಾದ ಬಳಿಕ ಟ್ಯಾಟೋದಿಂದ ಎಚ್​ಐವಿ, ಸ್ಕಿನ್​ ಕ್ಯಾನ್ಸರ್​ ಸೇರಿದತೆ ಚರ್ಮ ರೋಗಗಳು ಬರುತ್ತಿವೆ ಎನ್ನಲಾಗಿದೆ. ಹೀಗಾಗಿ ಇದಕ್ಕೆ ರಾಜ್ಯದಲ್ಲಿ ಹೊಸ ಕಾನೂನು ತರಲು ಸರ್ಕಾರ ಮುಂದಾಗಿದೆ. ಇದರ ಬೆನ್ನಲ್ಲೇ ತರಕಾರಿ ಅಂಗಡಿಗಳಲ್ಲಿ ಮಾರಾಟ ಮಾಡುವ ಹಸಿ ಬಟಾಣಿ ಕಾಳು, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಕಲ್ಲಂಗಡಿ ಹಣ್ಣುಗಳಲ್ಲಿ ಕೃತಕ ಬಣ್ಣಗಳನ್ನು ಬಳಸಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಮುಂದಾಗಿದೆ.

ರೈತರು ಕಷ್ಟಪಟ್ಟು ಕಲ್ಲಂಗಡಿ ಬೆಲೆ ಬೆಳೆಸುತ್ತಾರೆ ಆದರೆ ಈ ಮದ್ಯವರ್ತಿಗಳಲ್ಲಿ ಕೆಲವರು ಹಣ್ಣುಗಳಿಗೆ ಕೃತಕ ಬಣ್ಣದ ಇಂಜೆಕ್ಷನ್ ನೀಡುತ್ತಾರೆ. ಅದರಿಂದ ಕಲ್ಲಂಗಡಿ ಹಣ್ಣನ್ನು ಕೊಯ್ದಾಗ ಅದು ಅತ್ಯಂತ ಕೆಂಪಾಗಿ, ಆಕರ್ಷಣೀಯವಾಗಿ ಕಾಣುತ್ತದೆ. ಇನ್ನೂ ಕೆಲವರು ಕೆಂಪು ಬಣ್ಣದ ಜೊತೆಗೆ ರುಚಿಯನ್ನು ತರುವಂಥ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿರುತ್ತಾರೆ. ಹಾಗಾಗಿ, ಕಲ್ಲಂಗಡಿ ಹಣ್ಣನ್ನು ಕೊಳ್ಳುವಾಗ ಅಂಗಡಿಯವರು ನೀಡುವ ಸ್ಯಾಂಪಲ್ ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ ಹಾಗೂ ರುಚಿಕರವಾಗಿರುತ್ತದೆ. ಇದಕ್ಕೆ ಗ್ರಾಹಕರು ಮರುಳಾಗಿ ಹಣ್ಣುಗಳನ್ನು ಕೊಳ್ಳುತ್ತಾರೆ. ಹೀಗಾಗಿ ಇದನ್ನು ತಡೆಯಲು ಕೃತಕ ರಾಸಾಯನಿಕಗಳಿಂದ ಜನರನ್ನು ಪಾರು ಮಾಡಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಸಿಹಿ ಇಲ್ಲದಿದ್ದರೂ ಕೆಂಪಾಗಿ ಕಾಣುತ್ತಿರುವ ಕಲ್ಲಂಗಡಿ ಹಣ್ಣು ಕಲಬೆರಕೆ ಅಂತಲೂ ಅನಿಸಬಹುದು. ಕಲಬೆರಕೆ ಪ್ರಧಾನವಾಗಿರುವ ಇವತ್ತಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣು ಸಹ ವಿಷಕಾರಿ ರಾಸಾಯನಿಕಗಳಿಂದ (toxic chemicals) ಮುಕ್ತವಲ್ಲ ಅಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿರುವುದರಿಂದ ಹಣ್ಣನ್ನು ಸೇವಿಸುವ ಮೊದಲು ಒಂದು ಟೆಸ್ಟ್ ನಡೆಸುವುದು ಬಹಳ ಮುಖ್ಯ. ನಮ್ಮ ಬೆಂಗಳೂರು ಪ್ರತಿನಿಧಿ ಕಲ್ಲಂಗಡಿ ಮಾರಾಟ ಮಾಡುವ ರಸ್ತೆಬದಿಯ ಅಂಗಡಿಯೊಂದಕ್ಕೆ ತೆರಳಿ ಅಲ್ಲಿ ಸಿಗುವ ಕಲ್ಲಂಗಡಿ ಕೆಮಿಕಲ್ ಮಿಶ್ರಿತವೋ ಇಲ್ಲವೋ ಅನ್ನೋದನ್ನು ಡೆಮೋ ಮಾಡಿದ್ದಾರೆ. ಕಲ್ಲಂಗಡಿ ಹಣ್ಣಿನ ಮೇಲೆ ಅಂದರೆ ಕೆಂಪಗಿರುವ ಒಳಭಾಗದ ಮೇಲೆ ಟಿಶ್ಯೂ ಪೇಪರ್ ಇಟ್ಟಾಗ ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಅದು ರಾಸಾಯನಿಕ ಮಿಶ್ರಿತ ಅನ್ನೋದು ಸಾಬೀತಾಗುತ್ತದೆ. ಹಾಗಾಗಿ ಕೆಂಬಣ್ಣ ನೋಡಿ ಮೋಸ ಹೋಗಬೇಡಿ ಎಂದು ತಿಳಿಸಿದ್ದಾರೆ.

ಕೆಮಿಕಲ್ ಕಲರ್ ಇಂಜೆಕ್ಟ್ ಮಾಡಲಾಗುತ್ತಿದೆ ಎಂಬ ಆರೋಪ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಕಲ್ಲಂಗಡಿ ಹಣ್ಣಿನ ಸ್ಯಾಂಪಲ್​ ಸಂಗ್ರಹ ಮಾಡುತ್ತಿದ್ದಾರೆ. ಬಳಿಕ ಹಣ್ಣನ್ನು ಲ್ಯಾಬ್​ ರವಾನೆ ಮಾಡಲಾಗುತ್ತಿದ್ದು, ವರದಿ ಬಳಿಕ ಹಣ್ಣಿನ ಗುಣಮಟ್ಟ ತಿಳಿಯಲಿದೆ.

ಈ ರೀತಿ ಮಾಡಿದರೆ ಕೆಮಿಕಲ್​ ಕಲ್ಲಂಗಡಿ ಪತ್ತೆ ಹಚ್ಚಬಹುದು …!

ಒಂದು ಸಣ್ಣ ಪೀಸ್ ಕಲ್ಲಂಗಡಿ ಹಣ್ಣನ್ನು ನೀರಿನಲ್ಲಿ ಬೆರೆಸಿ ನೀರು ಗುಲಾಬಿ ಬಣ್ಣಕ್ಕೆ ತಿರುಗಿಯಾ ಎಂಬುದು ಗಮನಿಸಿ. ನೀರು ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಅದು ಕೆಮಿಕಲ್​ ಕಲ್ಲಂಗಡಿಯಾಗಿರುತ್ತೆ. ಗುಲಾಬಿ ಬಣ್ಣಕ್ಕೆ ತಿರುಗಿದ್ರೆ ಹಣ್ಣಿಗೆ ಕೃತಕ ಬಣ್ಣ ಸೇರಿಸಲಾಗಿರುತ್ತೆ. ಟಿಶ್ಯೂ ಪೇಪರ್​ನಿಂದ ಹಣ್ಣನ್ನು ಒತ್ತಿ ನೋಡಬೇಕು ಆಗ ಪೇಪರ್​ಗೆ ಕೆಂಪು ಬಣ್ಣ ಹತ್ತಿಕೊಂಡರೆ ಅದು ಕಲಬೆರಕೆ ಕಲ್ಲಂಗಡಿಯಾಗಿರುತ್ತೆ.ಲರ್ ಬರುವಂತೆ ಇಂಜೆಕ್ಟ್​ ಮಾಡಿರುವ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ಫುಡ್ ಪಾಯ್ಸನಿಂಗ್​ನಂತಹ ಸಮಸ್ಯೆಗಳು ಆಗಲಿವೆ. ಅಲ್ಲದೇ ವಾಂತಿ ಭೇದಿಯಂತಯ ಸಮಸ್ಯೆಗಳಾಗುವ ಸಾಧ್ಯತೆಗಳಿವೆ. ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಸಾಯನಿಕ ಕಲ್ಲಂಗಡಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಇಂಜೆಕ್ಟ್​ ನೀಡಿರುವ ಕಲ್ಲಂಗಡಿ ಹಣ್ಣಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ. ಕೆಮಿಕಲ್​ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಸರಿಯಾದ ಸಮಯಕ್ಕೆ ಹಸಿವು ಆಗುವುದಿಲ್ಲ. ಹಸಿವಿನ ಕೊರತೆ ನಮ್ಮಲ್ಲಿ ಕಾಡುತ್ತದೆ. ಇದರಿಂದ ಸರಿಯಾದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಆಗದಂತೆ ಆಗಿ ಗ್ಯಾಸ್ಟ್ರಿಕ್​ ಸಮಸ್ಯೆ ಉಮಟಾಗುತ್ತೆ. ಸುಸ್ತು ಮತ್ತು ಬಾಯಾರಿಕೆ ಕೆಮಿಕಲ್​ ಹಗೂ ಕೃತ ಬಣ್ಣದ ಕಲ್ಲಂಗಡಿ ಸೇವನೆಯಿಂದ ಕಿಡ್ನಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular