ಕೃಪೆ : ಸಂ.ಕ
ಬೆಂಗಳೂರು : ರಾಜ್ಯದ 31 ಜಿಲ್ಲೆ ಗಳಲ್ಲಿ ರಾಜ್ಯ ಸರ್ಕಾರದ ವಿವಿಧ ಕಾಮಗಾರಿ ನಡೆಸಿದ ಬಿಲ್ ಬಾಕಿ 64 ಸಾವಿರ ಕೋಟಿ ರೂ. ಗಳನ್ನು ದಾಟಿದ್ದು, ಗುತ್ತಿಗೆದಾರರು ಸರ್ಕಾರದಿಂದ ಬಾಕಿ ವಸೂಲಿ ಮಾಡಲು ಆಯಾ ಜಿಲ್ಲೆಗಳಿಗೆ ಸಂಬಂಧ ಪಟ್ಟ ಹೈಕೋರ್ಟ್ ಪೀಠಗಳಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಿಂತನೆ ನಡೆಸಿದ್ದಾರೆ.
ಅಲ್ಲದೇ ಮಾ.1 ರಿಂದ ರಾಜ್ಯಾ ದ್ಯಂತ ಸರ್ಕಾರಿ ಕಾಮಗಾರಿ ಸಂಪೂರ್ಣ ಸ್ತಬ್ಧಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಕಳೆದ 5 ವರ್ಷಗಳಿಂದ ಸರ್ಕಾರಿ ಕಾಮಗಾರಿಗಳ ಬಿಲ್ ಬಾಕಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದ್ದಲ್ಲದೇ 2023 ರಿಂದ ಈಚೆಗೆ ನಾನಾ ಕಾರಣಗಳಿಂದ ಬಾಕಿ ಬಿಲ್ ಬಿಡುಗಡೆ ಮಾಡುತ್ತಿಲ್ಲ ಎಂಬುದು ಗುತ್ತಿಗೆದಾರರ ಅಳಲು. ಸಿವಿಲ್ ಗುತ್ತಿಗೆದಾರರ ಸಂಘ ಈ ಕುರಿತು ಅಂಕಿ ಆಂಶಗಳನ್ನು ಮುಂದಿಟ್ಟಿದೆ.
ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಸುದೀರ್ಘ ಬೇಡಿಕೆ ಸಲ್ಲಿಸಿದೆ. ಎಲ್ಲ ಇಲಾಖೆಗಳು ಸೇರಿದಂತೆ ಸಿವಿಲ್ ಕಾಮಗಾರಿಗಳ ಬಾಕಿ ಮೊತ್ತ 63,940 ಕೋಟಿ ರೂ. ಬಿಡುಗಡೆ ಮಾಡಬೇಕುಎಂದು ಆಗ್ರಹಿಸಿದೆ.
ಈ ಬಗ್ಗೆ ಉತ್ತರ ಕರ್ನಾಟಕ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಷ್ ಪಾಟೀಲ್ ಮಾತನಾಡಿದ್ದು ರಾಜ್ಯದಲ್ಲಿ ಸಿವಿಲ್ ಗುತ್ತಿಗೆದಾರರು ಸಂಕಷ್ಟದಲ್ಲಿದ್ದು, ಆಯಾ ಜಿಲ್ಲೆಗಳ ಗುತ್ತಿಗೆದಾರರು ಕಲಬುರಗಿ, ಧಾರವಾಡ, ಬೆಂಗಳೂರು ಹೈಕೋರ್ಟ್ ಪೀಠಗಳಲ್ಲಿ ಸರ್ಕಾರದ ವಿರುದ್ಧ ಕೇಸ್ ಹಾಕುತ್ತೇವೆ. ಜೊತೆಗೆ ಮಾರ್ಚ್ ೧ರಿಂದ ಸಂಪೂರ್ಣ ಕಾಮಗಾರಿ ಸ್ಥಗಿತಗೊಳಿಸುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘದ ನೂತನ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಅವರೊAದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.