Saturday, February 22, 2025
Flats for sale
Homeಕ್ರೀಡೆಕಟಕ್‌ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು ..!

ಕಟಕ್‌ : ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು ..!

ಕಟಕ್‌ : ತವರಿನಲ್ಲಿ ಭಾರತ ಇಂಗ್ಲೆAಡ್ ವಿರುದ್ಧ ಟಿ 20 ಸರಣಿ ಜೊತೆಗೆ ಏಕದಿನ ಸರಣಿಯನ್ನೂ ಗೆಲ್ಲುವ ಮೂಲಕ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಅಷ್ಟೇ ಅಲ್ಲದೇ, ಬಹು ಚಿಂತೆ ಹೆಚ್ಚಿಸಿದ್ದ ನಾಯಕ ರೋಹಿತ್ ಶರ್ಮಾ ಕೊನೆಗೂ ಶತಕ ಬಾರಿಸುವ ಮೂಲಕ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಕಟಕ್‌ನಲ್ಲಿ ಮಿಂಚಲು ವಿಫಲವಾಗಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ 305 ರನ್‌ಗಳ ಗೆಲುವಿನ ಗುರಿ ನೀಡಿದ್ದ ಇಂಗ್ಲೆಂಡ್ , ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಮುಖಭಂಗ ಅನುಭವಿಸಿದೆ. ಹೀಗಾಗಿ ಭಾರತ ಇನ್ನೊಂದು ಪಂದ್ಯ ಬಾಕಿಯಿರುವಾಗಲೇ 2-೦ಯಿಂದ ಸರಣಿ ತನ್ನದಾಗಿಸಿಕೊಂಡಿದೆ. ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ಅನ್ನೇ ಆಯ್ದುಕೊಂಡಿತು. ಬೃಹತ್ ಮೊತ್ತ ಪೇರಿಸುವ ನಿಟ್ಟಿನಲ್ಲಿ ಇನ್ನಿಂಗ್ಸ್ ಆರಂಭಿಸಿದ ಫಿಲ್‌ಸಾಲ್ಟ್ ಹಾಗೂ ಬೆನ್ ಡಕೆಟ್, ಮೊದಲ ಪವರ್‌ಪ್ಲೇನಲ್ಲೇ 75 ರನ್‌ಗಳಿಸಿ ತಂಡಕ್ಕೆ ಭದ್ರಬುನಾದಿ ಹಾಕಿದರು. ಅದರಲ್ಲೂ ಬೆನ್ ಡಕೆಟ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರೈಸಿ ಮಿಂಚಿದರು. ಡಕೆಟ್ ಅರ್ಧಶತಕ ಗಳಿಸಿದ ನಂತರ ವರುಣ್ ಚಕ್ರವರ್ತಿ, ಇಂಗ್ಲೆAಡ್‌ಗೆ ಮೊದಲ ಆಘಾತ ನೀಡಿದರು. ತಾಳ್ಮೆ ಕಳೆದುಕೊಂಡ ಫಿಲ್ ಸಾಲ್ಟ್, ದೊಡ್ಡ ಹೊಡೆತಕ್ಕೆ ಕೈಹಾಕಿ ಜಡೇಜಾಗೆ ಕ್ಯಾಚ್ ನೀಡಿದರು. ಅರ್ಧಶತಕಗಳಿಸಿದ್ದ ಬೆನ್ ಡಕೆಟ್ ಜಡೇಜಾ ಬೌಲಿಂಗ್‌ನಲ್ಲಿ ಹಾರ್ದಿಕ್‌ಗೆ ಕ್ಯಾಚ್ ನೀಡಿದರು.

3 ನೇ ಕ್ರಮಾಂಕದಲ್ಲಿ ಆಡಿದ ಜೋ ರೂಟ್ ಕೂಡ ಇಂಗ್ಲೆಂಡ್ ಗೆ 6 ಬೌಂಡರಿಗಳ ಸಮೇತ 69 ರನ್‌ಗಳಿಸಿದರು. ಜೋ ರೂಟ್ ಜೊತೆಗೂಡಿದ ಹ್ಯಾರಿ ಬ್ರೂಕ್ ತಂಡದ ರನ್‌ಮೊತ್ತ ಹೆಚ್ಚಿಸುವ ಯತ್ನ ಮಾಡಿದರು. ಎಚ್ಚರಿಕೆ ಬ್ಯಾಟಿಂಗ್ ನಡೆಸುತ್ತಿದ್ದ ಬ್ರೂಕ್ 52 ಎಸೆತಗಳಲ್ಲೇ 31 ರನ್‌ಗಳಿಸಿ ಹರ್ಷಿತ್ ರಾಣಾಗೆ ಔಟಾದರು. ನಾಯಕ ಜಾಸ್ ಬಟ್ಲರ್ ಕೂಡ 35 ಎಸೆತಗಳಲ್ಲಿ 34 ರನ್‌ಗಳಿಸಿ ಔಟಾದರೆ, 69 ರನ್‌ಗಳಿಸಿದ್ದ ರೂಟ್ ಜಡೇಜಾ ಪೆವಿಲಿಯನ್‌ಗೆ ಕಳುಹಿಸಿದರು.

ಸ್ಫೋಟಕ ಬ್ಯಾಟರ್ ಲಿಯಾಮ್ ಲೀವಿಂಗ್‌ಸ್ಟನ್ 2 ಬೌಂಡರಿ-2 ಸಿಕ್ಸರ್‌ಗಳೊಂದಿಗೆ 32 ಎಸೆತಗಳಲ್ಲಿ 41 ರನ್‌ಗಳಿಸಿದರು. ಈ ಮೊದಲ ಆರು ಮಂದಿ ಉತ್ತಮವಾಗಿ ಆಡಿದ್ದು,ಇಂಗ್ಲೆಂಡ್ ಗೆ ನೆರವಾಯಿತು. ಆದರೆ, ಸ್ಲಾಗ್ ಓವರ್‌ಗಳಲ್ಲಿ ಇಂಗ್ಲೆಂಡ್ ಸ್ಫೋಟಕ ಬ್ಯಾಟಿಂಗ್‌ಗೆ ಮುಂದಾಗಿದ್ದರಿAದ, ಇಂಗ್ಲೆಂಡ್ ೩೦೪ ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಇನ್ನು ಬ್ಯಾಟಿಂಗ್ ಪಿಚ್‌ನಲ್ಲಿ ಚೇಸಿಂಗ್‌ಗೆ ಇಳಿದ ಭಾರತದ ಶುಭಮನ್ ಗಿಲ್ ಹಾಗೂ ರೋಹಿತ್ಶ ರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

ಅದರಲ್ಲೂ ನಾಯಕ ರೋಹಿತ್ ಶರ್ಮಾ ಸಿಕ್ಸರ್‌ಗಳನ್ನು ಸಿಡಿಸಿ, ಬೃಹತ್ ರನ್ ದಾಖಲಿಸುವ ಮುನ್ಸೂಚನೆ ನೀಡಿದರು. ಈ ಜೋಡಿ ಮೊದಲ ಪವರ್‌ಪ್ಲೇನಲ್ಲಿ 77 ರನ್‌ಗಳನ್ನು ಕಲೆ ಹಾಕಿ ಭದ್ರಬುನಾದಿ ಹಾಕಿದ್ದರು. ಭಾರತದ ಇನ್ನಿಂಗ್ಸ್ನ ಆರಂಭದಲ್ಲೇ ಫ್ಲಡ್ ಲೈಟ್ ಆಫ್ ಆದ ಕಾರಣ, ಅರ್ಧಗಂಟೆ ಪಂದ್ಯ ಸ್ಥಗಿತಗೊಂಡಿತ್ತು.

ಇದಾದ ಬಳಿಕವೂ ರೋಹಿತ್ ಆರ್ಭಟ ಮತ್ತಷ್ಟು ಹೆಚ್ಚಾಯಿತು. ಹೀಗಾಗಿ ಕೇವಲ 31 ಎಸೆತಗಳಲ್ಲಿ ರೋಹಿತ್ ಅರ್ಧಶತಕ ಪೂರೈಸಿದರು. ರೋಹಿತ್ ಅರ್ಧಶತಕ ಗಳಿಸುತ್ತಿದ್ದಂತೆ ಶುಭಮನ್ ಗಿಲ್ ಕೂಡ ಹಾಫ್ ಸೆಂಚುರಿಗಾಗಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರಿAದ, ಭಾರತ ಕೇವಲ 81 ಎಸೆತಗಳಲ್ಲೇ ನೂರರ ಗಡಿ ದಾಟಿತು. ಆದರೆ, 136 ರನ್‌ಗಳಿಸಿದ ಈ ಜೋಡಿ, ಓವರ್‌ಟನ್ ಬೌಲಿಂಗ್‌ನಲ್ಲಿ ಗಿಲ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಬೇರ್ಪಟ್ಟಿತು.

ಮೊದಲ ಏಕದಿನ ಪಂದ್ಯದಲ್ಲಿ ಆಡದ ವಿರಾಟ್ ಕೊಹ್ಲಿ,2 ನೇ ಪಂದ್ಯದಲ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿAಗ್ ನಡೆಸಿದರು. ಆದರೆ, 8 ಎಸೆತಗಳನ್ನು ಎದುರಿಸಿದ ಕೊಹ್ಲಿ, ಒಂದು ಬೌಂಡರಿಯೊAದಿಗೆ 5 ರನ್‌ಗಳಿಸಿದರು. ಆದಿಲ್ ರಶೀದ್‌ನ ಲೆಗ್ ಸ್ಪಿನ್‌ಗೆ ವಿರಾಟ್ ಔಟಾಗಬೇಕಾಯಿತು. ಆದರೆ, ರೋಹಿತ್‌ರನ್ನು ಶತಕದಿಂದ ತಪ್ಪಿಸಲು ಇಂಗ್ಲೆAಡ್‌ನಿAದ ಸಾಧ್ಯವಾಗಲಿಲ್ಲ. ಕೇವಲ ೭೬ ಎಸೆತಗಳಲ್ಲಿ ತನ್ನ ಶತಕ ಬಾರಿಸಿದ ರೋಹಿತ್ ಶರ್ಮಾ, ಅಂತಾರಾಷ್ಟಿçÃಯ ಕ್ರಿಕೆಟ್‌ನಲ್ಲಿ 32 ನೇ ಹಾಗೂ ಇಂಗ್ಲೆAಡ್ ವಿರುದ್ಧ 3 ನೇ ಹಾಗೂ ಭಾರತದಲ್ಲೇ 14 ನೇ ಶತಕ ಬಾರಿಸಿದರು. ಇದರಿಂದ ಭಾರತಕ್ಕೆ ಗೆಲುವಿನ ಸಾಧ್ಯತೆಗಳು ಹೆಚ್ಚಾದವು. ಅಂತಿಮ90 ಎಸೆತಗಳಲ್ಲಿ 119 ರನ್‌ಗಳಿಸಿದ ಹಿಟ್‌ಮ್ಯಾನ್, ಲಿಯಾಮ್ ಲೀವಿಂಗ್‌ಸ್ಟನ್‌ನಲ್ಲಿ ಕ್ಯಾಚ್ ನೀಡಿ ಹೊರ ನಡೆದರು.

ಉತ್ತಮ ಆಟವಾಡುತ್ತಿದ್ದ ಶ್ರೇಯಸ್ ಅಯ್ಯರ್ 44 ರನ್‌ಗಳಿಸಿ ರನೌಟ್ ಆದರು.ಕನ್ನಡಿಗ ಕೆ.ಎಲ್. ರಾಹುಲ್ 10 ರನ್ ಹಾಗೂ, ಪಾಂಡ್ಯ ತಲಾ 10 ರನ್‌ಗಳಿಸಿ ಔಟಾದರು. ಆದರೆ, ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ಅಕ್ಷರ್ ಪಟೇಲ್ ಕೊನೆವರೆಗೂ ಹೋರಾಡಿ ಅಜೇಯ 41 ರನ್ ಗಳಿಸಿದರು. ಇದರಿಂದ ಭಾರತ ಗೆಲುವು ಸಾಧಿಸಿತು.

ಸಂಕ್ಷಿಪ್ತ ಸ್ಕೋರ್: ಇಂಗ್ಲೆAಡ್ 49.5 ಓವರ್‌ಗಳಲ್ಲಿ 305ಕ್ಕೆ ಆಲೌಟ್. ಭಾರತ 44.3 ಓವರ್‌ಗಳಲ್ಲಿ6 ವಿಕೆಟ್‌ಗೆ 308 ರನ್.

RELATED ARTICLES

LEAVE A REPLY

Please enter your comment!
Please enter your name here

Most Popular