Sunday, February 23, 2025
Flats for sale
Homeಜಿಲ್ಲೆಮಂಗಳೂರು : ಕ್ಲಾಕ್ ಟವರ್ ಬಳಿ ಅವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಾಣ : ಸೂಕ್ತ ಕ್ರಮ...

ಮಂಗಳೂರು : ಕ್ಲಾಕ್ ಟವರ್ ಬಳಿ ಅವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಾಣ : ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಮೇಯರ್ ಸೂಚನೆ ..!

ಮಂಗಳೂರು : ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ಸ್ಥಳವಾದ ಕ್ಲಾಕ್ ಟವರ್ ಸುಂದರವಾಗಿ ನಿರ್ಮಾಣವಾಗಿದೆ. ಆದರೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ವೃತ್ತ ಹಾಗೂ ರಸ್ತೆ ವಿಭಾಜಕದಿಂದಾಗಿ ಜನರು ಹಲವು ಸಮಸ್ಯೆ ಎದುರಿಸುವಂತಾಗಿದೆ. ಸ್ಥಳಕ್ಕೆ ಮೇಯರ್ ಮನೋಜ್ ಕುಮಾರ್ ಸೇರಿದಂತೆ ಸ್ಥಾಯಿ ಸಮಿತಿ ಸದಸ್ಯರು ಭೇಟಿ, ನೀಡಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.

ಮಂಗಳೂರು ನಗರದ ಹಂಪನಕಟ್ಟೆಯ ಕ್ಲಾಕ್ ಟವರ್ ಸಮೀಪದ ಡಿವೈಡರ್‌ಗಳಲ್ಲಿ ಸೂಕ್ತ ರೀತಿಯಲ್ಲಿ ತಡೆಬೇಲಿಯನ್ನು ಅಳವಡಿಸದೇ ಹಲವು ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವಾಹನ ದಟ್ಟಣೆಯ ಸಮಯದಲ್ಲೂ ರಸ್ತೆ ದಾಟುತ್ತಿದ್ದು ಅಪಾಯಕಾರಿಯಾಗಿ ಗೋಚರಿಸುತ್ತಿದೆ, ರಸ್ತೆಯ ವಿಭಾಜಕ ಅವೈಜ್ಞಾನಿಕವಾಗಿರುವ ಕಾರಣ ಅನೇಕ ವಾಹನಗಳು ವಿಭಾಜಕಕ್ಕೆ ಡಿಕ್ಕಿ ಹೊಡೆದು ಅಪಾಯ ಸಂಭವಿಸಿದ್ದು ವಿಭಾಜಕ ಕೂಡಾ ಹಾನಿಯಾಗಿದೆ. ಇನ್ನು ಮಂಗಳೂರು ಯುನಿವರ್ಸಿಟಿಯಿಂದ ಕ್ಲಾಕ್ ಟವರ್ ತನಕದ ವಿಭಾಜಕದಲ್ಲಿ ಸರಿಯಾದ ತಡೆ ಬೇಲಿ ಕೂಡಾ ಅಳವಡಿಸದೆ ನಿರ್ಲಕ್ಷ್ಯ ತೋರಿಸಲಾಗಿದೆ. ಇದು ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದು, ಯುನಿವರ್ಸಿಟಿ ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಸೇರಿದಂತೆ ನಿತ್ಯ ಸಂಚರಿಸುವ ಜನರಿಗೆ ಸಂಚಕಾರ ತಂದಿದೆ. ಸ್ಥಳಕ್ಕೆ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಸೇರಿದಂತೆ ಸ್ಥಾಯಿ ಸಮೀತಿ ಸದಸ್ಯರು ಭೇಟಿಯನ್ನು ನೀಡಿದ್ರು.ಈ ಬಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್ ಅವರು ಈ ಬಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಇಲ್ಲಿ ತಡೆಬೇಲಿ ನಿರ್ಮಾಣ ಮಾಡಲಾಗುವುದು ಜನದಟ್ಟಣೆಯ ಸ್ಥಳವಾಗಿರೋದರಿಂದ ಆಕರ್ಷಣೆ ಸ್ಥಳವನ್ನವಾಗಿ ಮಾಡಲಾಗುವುದು ಎಂದು ಹೇಳಿದರು.

ಒಟ್ಟಾರೆ ಇಲ್ಲಿ ರಸ್ತೆ ವಿಭಾಜಕದಲ್ಲಿ ಸರಿಯಾದ ತಡೆ ಬೇಲಿ ಹಾಗೂ ರಸ್ತೆ ದಾಟಲು ಸುರಕ್ತಿತ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಮಂಗಳೂರು ನಗರದ ಅತಿ ಹೆಚ್ಚು ಜನ ದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ಪ್ರದೇಶ ಇದಾಗಿದ್ದು,ಆಗಾಗೆ ಮಿನಿ ವಿಧಾನಸೌಧ ಬಳಿಯಲ್ಲಿ ನಡೆಯುವ ಪ್ರತಿಭಟನೆಯಿಂದ ಟ್ರಾಫಿಕ್ ಜಾಮ್ ಕೂಡಾ ಉಂಟಾಗುತ್ತದೆ. ಹೀಗಿರುವಾಗ ಈ ಸ್ಥಳದಲ್ಲಿ ಅಗತ್ಯ ಸುರಕ್ಷಾ ಕ್ರಮವನ್ನು ಕೈಗೊಳ್ಳುವುದು ಪ್ರತಿಯೊಂದು ಇಲಾಖೆಯ ಜವಾಬ್ಧಾರಿಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆ , ಮಂಗಳೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಇದಕ್ಕೆ ಒಂದು ಪರಿಹಾರ ಕಲ್ಪಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಈ ವೇಳೆ ಉಪಮೇಯರ್ ಭಾನುಮತಿ,ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀಣಾ ಮಂಗಳ, ಕದ್ರಿ ಮನೋಹರ್ ಶೆಟ್ಟಿ,ಸುಮಿತ್ರಾ ಕರಿಯ ಅವರು ಮೇಯರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular