ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಬಳಸುವ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಅನಿಯಮಿತವಾಗಿ ಟೋಲ್ ಬಳಸು ವವರು ಇನ್ನು ಮುಂದೆ 3 ಸಾವಿರ ರೂ. ಕೊಟ್ಟು ವಾರ್ಷಿಕ ಟೋಲ್ ಪಾಸ್ ಪಡೆಯ ಬಹುದು ಅಥವಾ ಒಂದು ಬಾರಿ 30 ಸಾವಿರ ಪಾವತಿಸುವ ಮೂಲಕ 15 ವರ್ಷಗಳವರೆಗೆ ಲೆಕ್ಕವಿಲ್ಲದಷ್ಟು ಬಾರಿ ಟೋಲ್ ಬಳಸಲು ಜೀವಾವಧಿ ಪಾಸ್ ಖರೀದಿಸಬಹುದು. ಈ ಪ್ರಸ್ತಾವಗಳನ್ನು ಜಾರಿಗೆ ತರುವ ದಿಸೆಯಲ್ಲಿ ಸಾರಿಗೆ ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ.
ಕೇಂದ್ರದಿಂದ ಟೋಲ್ ಗಿಫ್ಟ್ ಎಂದು ಹೇಳಬಹುದು ಸದ್ಯ ಟೋಲ್ ದಾಟಲು 240 ರೂ.ಗಳ ಮಾಸಿಕ ಪಾಸ್ ನೀಡಲಾಗುತ್ತೆ ಆದರೆ ವಾರ್ಷಿಕವಾಗಿ ಈ ಮೊತ್ತ 4080 ರೂಪಾಯಿಯಷ್ಟಾಗುತ್ತದೆ, ಈಗ ಬರೀ 3000 ರೂ. ಗೆ ವಾರ್ಷಿಕ ಪಾಸ್ ಪಡೆಯಬಹುದು ಜತೆಗೆ 3೦೦೦೦ ರೂಪಾಯಿ ನೀಡಿ ಜೀವಾವಧಿ ಟೋಲ್ ಪಾಸ್‌ನ್ನೂ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.