Saturday, February 22, 2025
Flats for sale
Homeಸಿನಿಮಾಹೈದೆರಾಬಾದ್ : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ’ಕಣ್ಣಪ್ಪ’ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್..!

ಹೈದೆರಾಬಾದ್ : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ’ಕಣ್ಣಪ್ಪ’ ಚಿತ್ರದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್..!

ಹೈದೆರಾಬಾದ್ : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ’ಕಣ್ಣಪ್ಪ’ ಚಿತ್ರದಲ್ಲಿ ನಟ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಈ ವರೆಗಿನ ಲುಕ್ ಬಿಡುಗಡೆ ಆಗಿರಲಿಲ್ಲ. ಇದೀಗ, ಇಂದು (ಫೆ. 3) ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿದೆ ಚಿತ್ರತಂಡ. ಭಾರತೀಯ ಚಿತ್ರರಂಗ ದಲ್ಲಿಯೇ ಬಹು ನಿರೀಕ್ಷೆ ಹುಟ್ಟುಹಾಕಿರುವ ಕಣ್ಣಪ್ಪಚಿತ್ರದಲ್ಲಿ ಸ್ಟಾರ್ ತಾರಾಗಣವಿದೆ.

ಸೌತ್‌ನ ಬಹುತೇಕ ಎಲ್ಲ ಇಂಡಸ್ಟಿçಯ ಕಲಾವಿದರು ನಟಿಸಿದ್ದಾರೆ. ಇಂತಿಪ್ಪ ಸ್ಟಾರ್ ಕಾಸ್ಟ್ನಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು, ಪ್ರಭಾಸ್ ಅವರ ಪಾತ್ರ. ಇದೀಗ ಇದೇ ಪ್ರಭಾಸ್, ಕಣ್ಣಪ್ಪ ಚಿತ್ರದಲ್ಲಿ ರುದ್ರನಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಮೊದಲ ಲುಕ್ ಅನಾವರಣವಾಗಿದ್ದು, ರುದ್ರನ ಅವತಾರದಲ್ಲಿ ಪ್ರಭಾಸ್ ರಗಡ್ ಆಗಿಯೇ ಕಂಡಿದ್ದಾರೆ.

ಹರಡಿದ ತಲೆಗೂದಲು, ಕೈಯಲ್ಲಿ ಅರ್ಧ ಚಂದ್ರಾಕೃತಿ ಕೋಲು, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಹೆಗಲಿಗೆ ಕೇಸರಿ ವಸ್ತç ಧರಿಸಿ, ಹಣೆಗೆ ವಿಭೂತಿ ಧರಿಸಿ ಮಂದಹಾಸದ ನಗುವಿನಲ್ಲಿಯೇ ರುದ್ರನ ಪಾತ್ರ ಕಂಡಿದೆ.

ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ನೋಡುಗನಿಗೆ ಹೊಸ ಲೋಕದ ಪರಿಚಯ ಮಾಡಿಕೊಡಲು ಚಿತ್ರತಂಡ ತುದಿಗಾಲ ಮೇಲೆ ನಿಂತಿದೆ.ಅAದಹಾಗೆ, ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರವನ್ನು ಬಹುಕೋಟಿ ವೆಚ್ಚದಲ್ಲಿ ವಿಷ್ಣು ಮಂಚು ಅವರ ತಂದೆ ಎಂ. ಮೋಹನ್ ಬಾಬು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದಕ್ಕೂ ಮೊದಲು, ಶಿವನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪೋಸ್ಟರ್ ಒಂದರಲ್ಲಿ ಕಣ್ಣಪ್ಪ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಸಿನಿಮಾ ಮೂಲಕ ಅವರು ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಇದೀಗ ರುದ್ರನಾಗಿ ಪ್ರಭಾಸ್ ಪಾತ್ರ ರಿವೀಲ್ ಆಗುತ್ತಿದ್ದಂತೆ, ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ ಕಣ್ಣಪ್ಪ ಪಾತ್ರದಲ್ಲಿ ವಿಷ್ಣು ಮಂಚು ನಟಿಸಿದರೆ, ಪ್ರೀತಿಮುಕುಂದನ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ಕಾಜಲ್ ಅಗರ್ವಾಲ್ ಮತ್ತು ಪ್ರಭಾಸ್ ಸೇರಿ ಇನ್ನೂ ಹತ್ತಾರು ಘಟಾನುಘಟಿ ಕಲಾ ವಿದರು ಪಾತ್ರವರ್ಗದಲ್ಲಿದ್ದಾರೆ. ಕಣ್ಣಪ ಚಿತ್ರವು 2025 ರ ಏಪ್ರಿಲ್ 25 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular