ನಾಗ್ಪುರ : ಈ ಮಧ್ಯೆ ಸೋಮವಾರ ಸಂಜೆ ನಾಗ್ಪುರ ಪೊಲೀಸರಿಂದ ತಪ್ಪೊಂದು ನಡೆದು ಹೋಗಿದ್ದು, ಕನ್ನಡಿಗನಿಗೆ ಅವಮಾನವಾಗಿದೆ. ದಶಕಕ್ಕೂ ಮೇಲೆ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಾಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ರಘು, ಟೀಮ್ ಹೋಟೆಲ್‌ಗೆ ತೆರಳುವ ವೇಳೆ ಪೊಲೀಸರು ಅಡ್ಡಗಟ್ಟಿದ್ದು, ತಾನು ತಂಡದ ಕೋಚ್ ಎಂದು ಹೇಳಿದರೂ, ಹೋಟೆಲ್‌ಗೆ ತೆರಳಲು ಅನುವು ಮಾಡಿಕೊಡಲಿಲ್ಲ.
ಈ ಘಟನೆಯ ವಿಡಿಯೋ ಸಾಮಾಜಿಕ ತಾಣದಲ್ಲಿ ಭಾರಿ ವೈರಲ್ ಆಗಿದೆ. ಟೀಮ್ ಬಸ್‌ನಿಂದ ಮೊದಲು ಇಳಿದ ರಘು, ನೇರವಾಗಿ ತನ್ನ ಕಿಟ್ ಹಿಡಿದು ಹೋಟೆಲ್‌ಗೆ ತೆರಳಿದ್ದಾರೆ. ಭಾರಿ ಭದ್ರತಾ
ವ್ಯವಸ್ಥೆ ಮಾಡಲಾಗಿತ್ತಾದರೂ, ರಘು, ಟೀಮ್ ಇಂಡಿಯಾದ ಜರ್ಸಿಯನ್ನೇ ತೊಟ್ಟು ಸಾಗಿದ್ದಾರೆ. ಇದ್ಯಾವುದನ್ನೂ ಗಮನಿಸದ ಪೊಲೀಸರಿಬ್ಬರು, ರಘುವನ್ನು ತಡೆಹಿಡಿದಿದ್ದಾರೆ. ಕೊನೆಗೆ ೩ನೇ
ಪೊಲೀಸ್ ಮಧ್ಯೆ ಪ್ರವೇಶಿಸಿ, ವಿಚಾರಣ ನಡೆಸಿದ್ದು, ನಂತರ ರಘು ಅವರನ್ನು ಹೋಟೆಲ್‌ಗೆ ಕಳುಹಿಸಿಕೊಟ್ಟಿದ್ದಾರೆ.