Wednesday, February 5, 2025
Flats for sale
Homeಕ್ರೀಡೆನಾಗ್ಪುರ : ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ : ಭಾರತದ ಅಭ್ಯಾಸ ಆರಂಭ..!

ನಾಗ್ಪುರ : ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ : ಭಾರತದ ಅಭ್ಯಾಸ ಆರಂಭ..!

ನಾಗ್ಪುರ : ನಾಳೆಯಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗಾಗಿ ಟೀಮ್ ಇಂಡಿಯಾ ಸೋಮವಾರವೇ ಮಹಾರಾಷ್ಟçದ ನಾಗ್ಪುರಕ್ಕೆ ಬಂದಿಳಿದಿದ್ದು, ಮಂಗಳವಾರ ಕಠಿಣ ಅಭ್ಯಾಸ ನಡೆಸಿದೆ.

ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಭಾರತಕ್ಕೆ ತನ್ನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸರಣಿಯ ೩ ಪಂದ್ಯಗಳಲ್ಲಷ್ಟೇ ಅವಕಾಶವಿದೆ. ಹಾಗಾಗಿ, ಟೀಮ್ ಇಂಡಿಯಾದ ಹಿರಿಯ ಆಟಗಾರರಿಗೆ ಈ ಸರಣಿ ಮಹತ್ವದ್ದೆನ್ನಿಸಿದೆ. ನಾಯಕ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್,ವಿರಾಟ್ ಕೊಹ್ಲಿ ಹಾಗೂ ರಿಶಬ್ ಪಂತ್ ಕಳೆದ ರಣಜಿ ಪಂದ್ಯಗಳಲ್ಲೂ ಢುಮ್ಕಿ ಹೊಡೆದಿದ್ದಾರೆ. ಹಾಗಾಗಿ, ಭಾರತೀಯ ಅಭಿಮಾನಿಗಳ ಹೃದಯ ಬಡಿತ ಕೂಡ ಹೆಚ್ಚಾಗಿದ್ದು, ಈ ೩ ಪಂದ್ಯಗಳಲ್ಲಿ ತಂಡದ ಬ್ಯಾಟಿAಗ್ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ಇಡಲಾಗಿದೆ.

೩ನೇ ಪಂದ್ಯಕ್ಕೆ ಜಸ್‌ಪ್ರೀತ್ ಅನುಮಾನ ಅತ್ತ ಬೌಲಿಂಗ್ ಪಡೆಯ ಬಲ ತುಂಬಬೇಕಾದ ವೇಗಿ ಜಸ್‌ಪ್ರೀತ್ ಬುಮ್ರಾ ಕಳೆದ ಆಸ್ಟೆçÃಲಿಯಾ ಟೆಸ್ಟ್ ಸರಣಿ ವೇಳೆ ಗಾಯಕ್ಕೆ ತುತ್ತಾಗಿದ್ದರು. ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಫಿಟ್ನೆಸ್‌ನತ್ತ ಗಮನ ಹರಿಸಿರುವ ಬುಮ್ರಾ, ಇಂಗ್ಲೆAಡ್ ವಿರುದ್ಧದ ೩ನೇ ಏಕದಿನ ಪಂದ್ಯದ ವೇಳೆಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ, ಸದ್ಯದ ಮಾಹಿತಿಗಳ ಪ್ರಕಾರ ಬುಮ್ರಾ, ನೇರವಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular