ಗದಗ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಿದ್ದು ಜನ ಕಿರಿ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡುಬಂದಿದೆ. ಮೈಕ್ರೋಫೈನಾನ್ಸ್ ಟಾರ್ಚರ್ ಬ್ರೇಕ್ ಗೆ ಸುಗ್ರೀವಾಜ್ಞೆ ಮುಂದಾದ್ರೂ ಕಿರುಕುಳ ಮುಂದುವರಿದಿದ್ದು ಗದಗ ಜಿಲ್ಲೆಯಲ್ಲಿ ಬಡ್ಡಿ ದಂದೆಕೋರರ ಟಾರ್ಚರ್ ಇನ್ನೂ ಹೆಚ್ಚಾಗಿದ್ದು ಕೇವಲ 10 ಸಾವಿರ ರೂಪಾಯಿಗೆ ವೃದ್ದೆಯನ್ನು ಹೊರಹಾಕಿ ಮನೆಗೆ ಬೀಗ ಹಾಗಿದ ಘಟನೆ ನಡೆದಿದೆ.
ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದ ಘಟನೆ ನಡೆದಿದ್ದು ಬಡ್ಡಿ ದಂಧೆಕೋರರು ವೃದ್ಧೆಯನ್ನು ಮನೆಯಿಂದ ಹೊರ ಹಾಕಿದ್ದಾರೆ. ಉಷಾದೇವಿ ಗುರುದೇವಯ್ಯ ಶಾಂತಸ್ವಾಮಿಮಠ (65) ಎಂಬುವರ ರೋಣ ಪಟ್ಟಣದ ಶಾಂಭವರ ಚಾಳ ನಲ್ಲಿರುವ ಮನೆಗೆ ಬೀಗ ಹಾಕಿದ್ದು ಮೌಲಾಸಾಬ್ ಬೆಟಗೇರಿ ಎಂಬುವರ ಬಳಿ 10 ಸಾವಿರ ರೂ ಸಹೋದರನ ಚಿಕಿತ್ಸೆಗಾಗಿ ಉಷಾದೇವಿ ಸಾಲ ಪಡೆದಿದ್ದರು ಕಾಲಾವಕಾಶ ಕೊಡಿ ಅಂದ್ರು ಬಡ್ಡಿ ದಂಧೆಕೋರ ಮೌಲಾಸಾಬ್ ಕೇಳದ ಇದ್ದು ಮನೆಯಿಂದ ಹೊರಹಾಕಿದ್ದಾನೆ.
ಇದೀಗ ಯಾರು ಸಹಾಯಕ್ಕೆ ಬರದೇ ಕಂಗಾಲಾಗಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದು ಮಾಧ್ಯಮದ ಮೊರೆಹೋಗಿದ್ದಾರೆ.ಗದಗ ಜಿಲ್ಲೆಯ ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳೀಯ ಪೊಲೀಸರು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.