ಮೈಸೂರು : ಮೈಕ್ರೋ ಫೈನಾನ್ಸ್ ಕಿರುಕುಳದಿಂದ ನಂಜನಗೂಡಿನಲ್ಲಿ ಇಬ್ಬರು ಸಾವನ್ನಪ್ಪಿದ್ದು ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವ ನಾರಾಯಣ್ ಆಕ್ರೋಶ ಹೊರಹಾಕಿದ್ದಾರೆ.
ಈಗಾಗಲೇ ಕೆಡಿಪಿ ಸಭೆ ಮಾಡಿ ಕ್ರಮ ತೆಗೆದುಕೊಳ್ಳಲು ಹೇಳಿದ್ದೇವೆ ತಹಶೀಲ್ದಾರ್ ಕೂಡ ಅರ್. ಬಿ.ಐ ಗೆ ಪತ್ರ ಬರೆದಿದ್ದಾರೆ ಇವತ್ತು ಮಲ್ಕುಂಡಿ ಗ್ರಾಮದಲ್ಲಿ ಮತ್ತೊಂದು ಸಾವಗಿದೆ ಈ ರೀತಿ ಆಗಬಾರದಿತ್ತು ನಿಜಕ್ಕೂ ನೋವಾಗಿದೆ ಯಾರು ಕೂಡ ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿದರು.
ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವಂತೆ ತಹಶೀಲ್ದಾರ್ ಗೆ ಹೇಳಿದ್ದೇನೆ
ಯಾರು ಹೆದರುವ ಅಗತ್ಯವಿಲ್ಲ ಸಿಎಂ ಕೂಡ ಸಭೆ ಮಾಡಿ ಹೇಳಿದ್ದಾರೆ ನಿಮ್ಮ ಜೊತೆ ನಾವು ಇರುತ್ತೇವೆ ಯಾರು ದೃತಿಗೆಡಬೇಡಿ ಎಂದು ನಂಜನಗೂಡಿನಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದ್ದಾರೆ.


