ಮಂಗಳೂರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜ.17೭ರಂದು ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ತಮಿಳುನಾಡು ಸಮೀಪದ ಪದ್ಮನೇರಿ ಗ್ರಾಮದಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಈ ದರೋಡೆಕೋರರು ಖತರ್ನಾಕ್ ಆಗಿದ್ದು ಇವರು ತಪ್ಪಿಸಲು ಅನೇಕ ತಂತ್ರಜ್ಞಾನವನ್ನು ಉಪಯೋಗಿಸಿದ್ದರು ಎನ್ನಲಾಗಿದೆ. ಬಂಧಿತರನ್ನು ಪದ್ಮನೇರಿ ಅಮ್ಮನ್ಕೋವಿಲ್ನ ಮುರುಗಂಡಿ ತೇವರ್ (36), ಮುಂಬೈ ದೊಂಬಿವಿಲಿ ಪಶ್ಚಿಮದ ಯೊಸುವ ರಾಜೇಂದ್ರನ್ (35), ಮುಂಬೈ ತಿಲಕ ನಗರ ಚೆಂಬೂರಿನ ಕಣ್ಣನ್ ಮಣಿ (36) ಎಂದು ಗುರುತಿಸಲಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಕಾರು, ಮೂರು ಸಜೀವ ಗುಂಡುಗಳ ಸಹಿತ ಎರಡು ಪಿಸ್ತೂಲ್, ತಲವಾರು, ಚೂರಿ, ಕಳವು ಮಾಡಿದ ಚಿನ್ನಾಭರಣ, ನಗದಿನ ಪೈಕಿ ಭಾಗಶಃ ನಗದು, ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರ ವಿವಿಧ ತಂಡಗಳನ್ನು ರಚಿಸಲಾಗಿತ್ತು. ದರೋಡೆಯ ಬಳಿಕ ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ದರೋಡೆಕೋರರು ಪರಾರಿಯಾಗಿ, ಅಲ್ಲಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ಮುಂಬೈ ಗ್ಯಾಂಗ್ನಿಂದ ಕೃತ್ಯ ದರೋಡೆಗೆಂದೇ ಮುಂಬೈನಿಂದ ದರೋಡೆಕೋರರು ಬಂದಿದ್ದರು. ದರೋಡೆ ಮಾಡಿ ಕೇರಳದಿಂದ ತಮಿಳುನಾಡುಗೆ ಪರಾರಿಯಾಗಿದ್ದರು ಮುಂಬೈಯಲ್ಲಿ ಒಬ್ಬನನ್ನು ತಮಿಳುನಾಡಿನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ. ಮುರುಗಂಡಿ ತೇವರ್ ಈ ಪ್ರಕರಣದ ಮುಖ್ಯ ಕಿಂಗ್ ಪಿನ್. ವಶಕ್ಕೆ ಪಡೆದುಕೊಂಡಿರುವ ಫಿಯೆಟ್ ಕಾರು ಮಹಾರಾಷ್ಟ್ರ ಮೂಲದ್ದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸ್ಥಳೀಯರ ಭಾಗಿ ಶಂಕೆ
ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ನಡೆಸಲು ಸಾಧ್ಯ ಇಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಮುಂದೆ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದಿದ್ದಾರೆ.
ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂಬೈ ಮೂಲದ ಗ್ಯಾಂಗ್ನಿಂದ ದರೋಡೆ ನಡೆದಿದೆ. ತಮಿಳುನಾಡು ಮೂಲದವರಾದ ದರೋಡೆಕೋರರು ದರೋಡೆ ಮಾಡಲೆಂದೇ ಮಂಗಳೂರಿಗೆ ಬಂದಿದ್ದರು. ಬಳಿಕ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು ಎಂದರು. ಅರೋಪಿ ದರೋಡೆ ಮಾಡಿದ ನಂತರ ಬೈಕ್ ನಲ್ಲಿ ಲಿಫ್ಟ್ ಕೇಳಿ ರೈಲ್ವೆ ಎಲ್ಲಿ ಎಂದು ಕೇಳಿದ್ದು ಬಳಿಕ ರೈಲಿನಲ್ಲಿ ಮುಂಬೈ ಗೆ ಪ್ರಯಾಣಿಸುತ್ತಿರುವಾಗ ಮಹತ್ವದ ದಾಖಲೆಗಳನ್ನು ಪೊಲೀಸರು ಸಂಗ್ರಹಿಸಿದ್ದರೆಂದು ತಿಳಿದಿದೆ. ಇನ್ನೋರ್ವ ತಮಿಳುನಾಡು ತಲುಪಿದ್ದು ಗೌಪ್ಯ ದಾಖಲೆಯನ್ನು ಆದರಿಸಿ ಪೊಲೀಸರು ಆರೋಪಿಗಳನ್ನು ಎಡೆಮೂರಿ ಕಟ್ಟಿದ್ದಾರೆಂದು ತಿಳಿದುಬಂದಿದೆ.ಒಟ್ಟಿನಲ್ಲಿ ಈ ಖತರ್ನಾಕ್ ಗ್ಯಾಂಗ್ ಇಂಥಹದೇ ಕೃತ್ಯವೆಸಗುವುದರಲ್ಲಿ ಜಿಪುಣರೆಂದು ತಿಳಿದಿದೆ.
ಗುಪ್ತಚರ ಇಲಾಖೆ ಈ ಪ್ರಕರಣ ಬೇಧಿಸಲು ಸಹಾಯ ಮಾಡಿದೆ. ಬಂಧಿತರಿಂದ ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ.ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೇ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.