Wednesday, October 22, 2025
Flats for sale
Homeಕ್ರೈಂಸುಳ್ಯ : ಕುಡಿದ ಅಮಲಿನಲ್ಲಿ ಗುಂಡು ಹಾರಿಸಿ ಪತ್ನಿಯ ಕೊಲೆ, ಬಳಿಕ ಆಸಿಡ್ ಕುಡಿದು ಪತಿ...

ಸುಳ್ಯ : ಕುಡಿದ ಅಮಲಿನಲ್ಲಿ ಗುಂಡು ಹಾರಿಸಿ ಪತ್ನಿಯ ಕೊಲೆ, ಬಳಿಕ ಆಸಿಡ್ ಕುಡಿದು ಪತಿ ಸಾವು ..!

ಸುಳ್ಯ : ವ್ಯಕ್ತಿ ಒಬ್ಬ ಕುಡಿದ ಅಮಲಿನಲ್ಲಿ ಸುಳ್ಯ ನೆಲ್ಲೂರು ಎಂಬಲ್ಲಿ ಆತನ ಪತ್ನಿಯನ್ನು ಗುಂಡು ಹಾರಿಸಿ ಕೊಲೆ ಮಾಡಿ, ಬಳಿಕ ಆತನೂ ಆಸಿಡ್‌ ಕುಡಿದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ವಿನೋದಾ, ಪತಿಯನ್ನು ರಾಮಚಂದ್ರ ಎಂದು ತಿಳಿದುಬಂದಿದೆ.

ರಾಮಚಂದ್ರ ನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಶುಕ್ರವಾರ ರಾತ್ರಿ ಕೂಡ ಪತ್ನಿ ವಿನೋದಾ, ಪತಿ ರಾಮಚಂದ್ರ ನಡುವೆ ಗಲಾಟೆ ಆಗಿದೆ. ಜಗಳ ಬಿಡಿಸಲು ಬಂದ ಮಗ ಪ್ರಶಾಂತ್​​​ನಿಗೆ ಫೈರಿಂಗ್​​ ಮಾಡಲು ರಾಮಚಂದ್ರ ಯತ್ನಿಸಿದ್ದಾನೆ. ಮಗನಿಗೆ ಶೂಟ್​​ ಮಾಡುವಾಗ ತಾಯಿ ವಿನೋದಾ ಅಡ್ಡ ಬಂದಿದ್ದಾರೆ. ಈ ವೇಳೆ ಗುಂಡು ತಗುಲಿ ವಿನೋದಾ ಕುಮಾರಿ ಮೃತಪಟ್ಟಿದ್ದಾರೆ.

ಘಟನಾಸ್ಥಳಕ್ಕೆ ಪಶ್ಚಿಮವಲಯ ಪೊಲೀಸ್‌ ಮಹಾ ನಿರೀಕ್ಷಕರಾದಅಮಿತ್‌ ಸಿಂಗ್‌ IPS ರವರು & ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಶ್ರೀ ಯತೀಶ್‌ ಎನ್‌, IPS ರವರು ಭೇಟಿನೀಡಿ ಪರಿಶೀಲಿಸಿದ್ದು ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 2023ರ ಕಲಂ 103 ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 25 ಮತ್ತು 27 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular