ಬೆಂಗಳೂರು : ಬಿನೋದ್ ಕುಮಾರ್ ಅವರು ಇಂದು ಇಂಡಿಯನ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಆಗಿ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ತಮ್ಮ ಪ್ರತಿಷ್ಠಿತ ವೃತ್ತಿಯ ಅವಧಿಯಲ್ಲಿ ಅವರು, ಚೀಫ್ ಜನರಲ್ ಮ್ಯಾನೇಜರ್(ಕಾರ್ಪೊರೇಟ್ ಕ್ರೆಡಿಟ್) ಝೋನಲ್ ಮ್ಯಾನೇಜರ್ ಮತ್ತು ದುಬೈ ಇಂಟರ್ ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ ನಲ್ಲಿರುವ ಪಿಎನ್‌ಬಿ ಕಾರ್ಯಾಚರಣೆಗಳ ಸಿಇಒ ಮುಂತಾದ ವಿವಿಧ ಪ್ರಮುಖ ಹುದ್ದೆಗಳನ್ನು ಹೊಂದಿದ್ದರು.
ಒಬ್ಬ ದಾರ್ಶನಿಕ ನಾಯಕನಾಗಿ ಅವರು ತಮ್ಮ ವೃತ್ತಿಯುದ್ದಕ್ಕೂ ಸದಾ ಆವಿಷ್ಕಾರ, ಕಾರ್ಯಾಚರಣೆ ಸಾಮರ್ಥ್ಯ ಹಾಗೂ ವರ್ಧಿತ ಗ್ರಾಹಕ ಅನುಭವವನ್ನು ಮುನ್ನಡೆಸಿದ್ದಾರೆ. Pಓಃ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ನ ಮಂಡಳಿಯಲ್ಲಿ Pಓಃ ಪರವಾಗಿ ಮತ್ತು ಐಎಸ್‌ಎಆರ್‌ಗಾಗಿ ಅವರು ನಾಮನಿರ್ದೇಶಿತ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಕುಮಾರ್ ಅವರು ವಿಜ್ಞಾನ ಪದವೀಧರರಾಗಿದ್ದಾರೆ ಮತ್ತು ಬ್ಯಾಂಕಿAಗ್ ಮತ್ತು ಫೈನಾನ್ಸ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹೊಂದಿದ್ದಾರೆ. ಅವರ ನಾಯಕತ್ವದಡಿ, ಇಂದಿಯನ್ ಬ್ಯಾAಕ್ ಮಾರುಕಟ್ಟೆ ಅಸ್ತಿತ್ವದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡು, ಗ್ರಾಹಕ ಸಂಬAಧಗಳನ್ನು ಆಳಗೊಳಿಸಿಕೊಳ್ಳುತ್ತಲೇ ದೇಶಾದ್ಯಂತ ಹಾಗೂ ವಿದೇಶಗಳ ಕೆಲವು ಆಯ್ದ ಪ್ರದೇಶಗಳಲ್ಲಿ ಇರುವ ತನ್ನ ಎಲ್ಲಾ ಗೌರವಾನ್ವಿತ ಗ್ರಾಹಕರಿಗೂ ಅದ್ವಿತೀಯವಾದ ಹಣಕಾಸು ಸೇವೆಗಳನ್ನು ಒದಗಿಸುವ ಅದರ ಬದ್ಧತೆ ಮುಂದುವರಿಸಲಿದ್ದಾರೆ.