ಪ್ರಯಾಗ್ ರಾಜ್ : ಮಹಾಕುಂಭಮೇಳದ ಅಂಗವಾಗಿ ಗಂಗಾ ಮತ್ತು ತ್ರಿವೇಣಿಯಲ್ಲಿ ಮಿಂದೇಳುವುದು ಮುಂದುವರಿದಿದೆ.ಪ್ರಯಾಗ್ರಾಜ್ನಲ್ಲಿ ಚಳಿಯ ತೀವ್ರತೆಯ ನಡುವೆಯೂ ಭಕ್ತರು ಮತ್ತು ಸ್ನಾನ ಮಾಡುವವರ ಉತ್ಸಾಹದಲ್ಲಿ ಯಾವುದೇ ಇಳಿಕೆ ಕಂಡುಬAದಿಲ್ಲ. ತ್ರಿವೇಣಿಯಲ್ಲಿ ಸ್ನಾನ ಮಾಡಲು ದೇಶ ಮತ್ತು ಪ್ರಪಂಚದಾದ್ಯAತದ ಲಕ್ಷಾಂತರ ಭಕ್ತರು ಪ್ರತಿದಿನ ಪ್ರಯಾಗರಾಜ್ಗೆ ಆಗಮಿಸುತ್ತಿದ್ದಾರೆ. ಮಹಾ ಕುಂಭಮೇಳದ ಆಡಳಿತದ ಪ್ರಕಾರ, ಜನವರಿ 11 ರಿಂದ ಜನವರಿ 16 ರವರೆಗಿನ ಈ ಆರು ದಿನಗಳಲ್ಲಿ ಏಳು ಕೋಟಿ ಜನರು ಗಂಗೆ ಮತ್ತು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಈ ಮಾಹಿತಿಯನ್ನು ಅಧಿಕೃತ ಹೇಳಿಕೆಯಲ್ಲಿ ನೀಡಲಾಗಿದೆ. ಮಹಾಕುಂಭ ಆರಂಭಕ್ಕೂ ಮುನ್ನ ಜನವರಿ 11ರಂದು ಸುಮಾರು 45 ಲಕ್ಷ ಜನರು ಸ್ನಾನ ಮಾಡಿದ್ದರೆ, ಜನವರಿ 12 ರಂದು 65 ಲಕ್ಷ ಜನರು ಸ್ನಾನ ಮಾಡಿರುವುದು ದಾಖಲೆಯಾಗಿದೆ.
ಮಹಾಕುಂಭದ ಮೊದಲ ದಿನ ಪೌಶ್ ಪೂರ್ಣಿಮಾ ಸ್ನಾನದಂದು 1.7೦ ಕೋಟಿ ಜನರು ಸ್ನಾನ ಮಾಡಿದ್ದಾರೆ .ಮತ್ತು ಮರುದಿನ ಜನವರಿ 14 ರಂದು ಮಕರ ಸಂಕ್ರಾAತಿ ಅಮೃತ ಸ್ನಾನದ ಸಂದರ್ಭದಲ್ಲಿ 3.5೦ ಕೋಟಿ ಜನರು ಸ್ನಾನ ಮಾಡಿದ್ದಾರೆ. ಈ ಮೂಲಕ ಮಹಾಕುಂಭದ ಮೊದಲ ಎರಡು ದಿನಗಳಲ್ಲಿ 5.2೦ ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ.
ಇದಲ್ಲದೇ ಜ.15ರ ಮಹಾಕುಂಭದ ಮೂರನೇ ದಿನದಂದು 4೦ ಲಕ್ಷ ಮಂದಿ ಹಾಗೂ ಜ.16ರ ಸಂಜೆ 6 ರವರೆಗೆ 3೦ ಲಕ್ಷ ಮಂದಿ ಸಂಗಮ ಸ್ನಾನ ಮಾಡಿದ್ದು ಈ ಮೂಲಕ ಸ್ನಾನ ಮಾಡಿದವರು ಸಂಖ್ಯೆ ಏಳು ಕೋಟಿ ದಾಟಿದೆ ಎಂದು ಅಧಿಕೃತ ಮಾಹಿತಿ ಲಭ್ಯವಾಗಿದೆ.