ನವದೆಹಲಿ : ಭಾರತದ ಕರೆನ್ಸಿಯಾದ ರೂಪಾಯಿ ಮೌಲ್ಯದಲ್ಲಿ ಸೋಮವಾರ 66 ಪೈಸೆಗಳಷ್ಟು ಕುಸಿಯುವ ಮೂಲಕ ಕಳೆದೆರಡು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಮೌಲ್ಯ ಸವಕಳಿ ದಾಖಲಿಸಿದೆ. ರೂಪಾಯಿ ಮೌಲ್ಯದಲ್ಲಿ 66 ಪೈಸೆ ನಷ್ಟವಾಗುವ ಮೂಲಕ 86.62 ರೂ.ಗೆ ಇಳಿದಿದೆ.
ಇಂಟರ್ಬ್ಯಾAಕ್ ವಿದೇಶಿ ವಿನಿಮಯ ಮೂಲಕ 86.12 ರೂ.ನೊಂದಿಗೆ ಆರಂಭವಾದರೂ ಮಧ್ಯಂತರದಲ್ಲಿ ರೂಪಾಯಿ ಮೌಲ್ಯದಲ್ಲಿ1 ಪೈಸೆ ಇಳಿಯಿತು. ಆದರೆ ದಿನಾಂತ್ಯಕ್ಕೆ ರೂಪಾಯಿ ಮೌಲ್ಯ 86.62ರಲ್ಲಿ ಸ್ಥಿರಗೊಂಡಿದೆ.
2023 ರ ಫೆ. 6 ರಂದು ರೂಪಾಯಿ ಮೌಲ್ಯದಲ್ಲಿ68 ಪೈಸೆ ನಷ್ಟವಾಗಿರುವುದು ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ಕುಸಿತವಾಗಿತ್ತು. ಕಳೆದ ಮಂಗಳವಾರ ಹಾಗೂ ಬುಧವಾರ ರೂಪಾಯಿ ಮೌಲ್ಯದಲ್ಲಿ ಅನುಕ್ರಮವಾಗಿ 6 ಹಾಗೂ 17 ಪೈಸೆಯಷ್ಟು ಕುಸಿದಿದ್ದರೆ, ಶುಕ್ರವಾರ 18 ಪೈಸೆಯಷ್ಟು ಕುಸಿದಿತ್ತು. ಆದರೆ ಅದೇ ದಿನ 5 ಪೈಸೆಯಷ್ಟು ಏರಿಕೆಯಾಗಿತ್ತು.
ಕಾರಣವೇನು?
ಷೇರುಮಾರುಕಟ್ಟೆಯ ಹೂಡಿಕೆದಾರರು ನಿರಂತರವಾಗಿ ಡಾಲರ್ ಮೌಲ್ಯದ ಹಿಂದೆ ಬಿದ್ದಿರುವುದು ರೂಪಾಯಿ ಮೌಲ್ಯದ ಅಭೂತಪೂರ್ವ ಕುಸಿತಕ್ಕೆ ಕಾರಣವಾಗಿದೆ. ಇದಲ್ಲದೆ, ವಿದೇಶಿ ಬಂಡವಾಳದಾರರು ಭಾರತೀಯ ಷೇರುಮಾರುಕಟ್ಟೆಯಿಂದ ಭಾರೀ ಪ್ರಮಾಣದಲ್ಲಿ ತಮ್ಮ ಬಂಡವಾಳ ವಾಪಸ್ ಪಡೆಯುತ್ತಿರುವುದೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಶುಕ್ರವಾರ 2,254.68೮ ಕೋಟಿ ರೂ ಮೌಲ್ಯದ ಷೇರು ವಾಪಸ್ ಪಡೆದಿದ್ದರು. ಇದುವರೆಗೆ 22,194 ಕೋಟಿ ರೂ.ಗಳಷ್ಟು ಮೌಲ್ಯದ
ಷೇರುಗಳನ್ನು ಹಿಂಪಡೆಯಲಾಗಿದೆ.
ವಿದೇಶಿ ವಿನಿಮಯ ಮೀಸಲು ಪ್ರಮಾಣ ಕುಸಿತ ಹಾಗೂ ಹೊರಹೊಮ್ಮುತ್ತಿರುವ ಮಾರುಕಟ್ಟೆಗಳ ಕರೆನ್ಸಿಗಳ ಕುಸಿತದ ನಡುವೆ ಅಮೆರಿಕ ಡಾಲರ್ ವಿರುದ್ಧ ಭಾರತೀಯ ಕರೆನ್ಸಿಗಳ ವಿನಿಮಯ ದರ ಕುಸಿಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.