ಜಮ್ಮು: ಜಮ್ಮು-ಕಾಶ್ಮೀರದ ಗಂಧೇರ್‌ಬಾಲ್ ಜಿಲ್ಲೆಯಲ್ಲಿರುವ 6.5 ಕಿ.ಮೀ ಉದ್ದದ ಝಡ್ ಮೋಡ್ ಸುರಂಗ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದರು. ಇದರಿಂದ ವರ್ಷವಿಡೀ ಸೋನಾಮಾರ್ಗ್ ಪ್ರವಾಸಿ ತಾಣಕ್ಕೆ ತೆರಳಲು ಅನುಕೂಲವಾಗಿದೆ.
ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ದ್ವಿಪಥ ಸುರಂಗವು ಶ್ರೀನಗರದಿಂದ ಸೋನಾಮಾರ್ಗ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ಪಾಕಿಸ್ತಾನ, ಚೀನಾದೊಂದಿಗೆ ಗಡಿ ಹಂಚಿಕೊAಡಿರುವ ಆಯಕಟ್ಟಿನ ಪ್ರದೇಶವಾಗಿರುವ ಲಡಾಖ್‌ಗೆ ಸರ್ವ ಖತುವಿನಲ್ಲೂ ಸಂಪರ್ಕ ಕಲ್ಪಿಸುತ್ತದೆ.
ಸುರಂಗ ನಿರ್ಮಾಣಕ್ಕೂ ಮೊದಲು ಈ ರಸ್ತೆಯು ಝಡ್ ಆಕಾರದಲ್ಲಿ ಇದ್ದ ಕಾರಣ ಇದಕ್ಕೆ ಝಡ್-ಮೋಡ್ ಸುರಂಗ ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಝಡ್‌ಮೋಡ್ ಎಂದರೆ ಝಡ್ ತಿರುವು ಎಂದರ್ಥ. ಈ ಸಂದರ್ಭದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಉಪಸ್ಥಿತರಿದ್ದರು. ಆ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರಕ್ಕೆ ನಾನು ನೀಡಿರುವ ಎಲ್ಲ ವಾಗ್ದಾನಗಳನ್ನೂ ಈಡೇರಿಸುವೆ. ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಲಿವೆ ಎಂದು ಹೇಳಿದರು.
ಈ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಬೇಕೆಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಮೋದಿ ಮೇಲಿನ ಮಾತನ್ನು ಹೇಳಿದರು. ಇದೇ ವೇಳೆ ಯೋಜನೆಯ ಕನಸು ಸಾಕಾರಗೊಳಿಸಿದ ಎಂಜಿನಿಯರ್‌ಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ, ಪ್ರತಿಕೂಲ ಹವಾಮಾನದ ನಡುವೆಯೂ ಸುರಂಗ ನಿರ್ಮಾಣ ಮಾಡಿದ ಅವರ ಶ್ರಮವನ್ನು ಶ್ಲಾಘಿಸಿದರು. ಯುಪಿಎ ಎರಡನೇ ಅವಧಿಯ ಸರ್ಕಾರದಲ್ಲಿಯೇ ಯೋಜನೆಯನ್ನು ರೂಪಿಸಲಾಗಿತ್ತು. ಆಗಿನ ಸಾರಿಗೆ ಸಚಿವ ಸಿ.ಪಿ ಜೋಶಿ ಅವರು ೨೦೧೨ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಝಡ್-ಮೋಡ್ ಸುರಂಗ ಸಮೀಪ ಅಕ್ಟೋಬರ್ ೨೦೨೪ರಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಏಳು ಕಾರ್ಮಿಕರು ಮೃತಪಟ್ಟಿದ್ದರು.
ವೈಶಿಷ್ಟö್ಯವೇನು?
1.ಸುರಂಗ ಮಾರ್ಗದ ಉದ್ದ-೬.೫ ಕಿ.ಮೀ
2.ನಿರ್ಮಾಣದ ವೆಚ್ಚ-೨,೪೦೦ ಕೋಟಿ
3.ತುರ್ತು ಸನ್ನಿವೇಶದಲ್ಲಿ ಪಾರಾಗುವ ಮಾರ್ಗದ ಅಗಲ-೭.೫ ಮೀ
4.ಸಮುದ್ರ ಮಟ್ಟದಿಂದ ಎತ್ತರ-೮,೬೫೦ ಅಡಿ ಸುರಂಗದ ಮಹತ್ವ
5.ಸರ್ವಋತುವಲ್ಲೂ ಲಡಾಖ್‌ಗೆ ಸಂಪರ್ಕ ಕಲ್ಪಿಸುವ ಸುರಂಗ ಮಾರ್ಗ
6.ರಕ್ಷಣಾ ಸರಕುಗಳ ಸಾಗಾಟಕ್ಕೆ ನೆರವು