Tuesday, February 4, 2025
Flats for sale
Homeಕ್ರೈಂಬೆಂಗಳೂರು : ಕಿತ್ತಳೆಗುಳಿ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದ ನಕ್ಷಲರ ಶಸ್ತ್ರಾಸ್ತ್ರ ವಶ ..!

ಬೆಂಗಳೂರು : ಕಿತ್ತಳೆಗುಳಿ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದ ನಕ್ಷಲರ ಶಸ್ತ್ರಾಸ್ತ್ರ ವಶ ..!

ಬೆಂಗಳೂರು : ಮೊನ್ನೆಯಷ್ಟೆ 6 ಮಂದಿ ನಕ್ಸಲೀಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಮ್ಮುಖದಲ್ಲಿ ಶರಣಾಗಿರುವ ಬೆನ್ನಲ್ಲೆ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದು ಗುಂಡು ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕೊಪ್ಪ ತಾಲ್ಲೂಕಿನ ಜಯಪುರ ಕಿತ್ತಲೆಗುಳಿ ಬಳಿಯ ಅರಣ್ಯ ಪ್ರದೇಶದಲ್ಲಿ 6 ಬಂದೂಕು ಮತ್ತು ಮದ್ದುಗುಂಡುಗಳು ದೊರೆತಿವೆ. ಶರಣಾಗತರಾದ ನಕ್ಸಲೀಯರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಪತ್ತೆ
ಮಾಡುವುದಾಗಿ ನಿನ್ನೆಯಷ್ಟೆ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ ಹೊತ್ತಲ್ಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಿದ್ದಾರೆ. ಶೋಧ ಕಾರ್ಯಾಚರಣೆ ಕೈಗೊಂಡಿದ್ದ ಚಿಕ್ಕಮಗಳೂರು ಜಿಲ್ಲಾ ಪೊಲೀಸರು,ಕೊಪ್ಪ ತಾಲೂಕು ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಿತ್ತಲೆಗುಳಿ ಕುಗ್ರಾಮ ಸಮೀಪದ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳ ಪೈಕಿ, ಒಂದು ಎಕೆ 56, ಮೂರು 303 ರೈಫಲ್, ಒಂದು 12 ಬೋರ್ ಎಸ್‌ಬಿಬಿಎಲ್, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ ಎಕೆ ಮದ್ದುಗುಂಡುಗಳು, 303 ಬಂದೂಕಿನ 133 ಗುಂಡುಗಳು ಸೇರಿದAತೆ 176 ಜೀವಂತ ಗುಂಡು ಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ 1959 ರ 25 (1ಬಿ), 7 ಮತ್ತು 25(1ಎ) ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ತಿಳಿಸಿದ್ದಾರೆ.

ಪರಿಹಾರ ಪ್ಯಾಕೇಜ್ : ಮುಖ್ಯವಾಹಿನಿಗೆ ಕರೆ ತರುವ ಉದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ 2024 ರಲ್ಲಿ ಹೊಸ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಂತೆ, ಶರಣಾಗತ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸರ್ಕಾರಕ್ಕೆ ಒಪ್ಪಿಸಿದಾಗ ನೀಡುವ ಶಸ್ತ್ರಾಸ್ತ್ರ ಪರಿಹಾರ ಪ್ಯಾಕೇಜ್ ಅನ್ನೂ ಪ್ರಕಟಿಸಿತ್ತು. ಅದರಂತೆ, ಒಂದು ಎಕೆ 47 ಗನ್‌ಗೆ 30 ಸಾವಿರ ರೂ., ಯುಎಂಜಿ, ಜಿಪಿಎಂ , ಆರ್‌ಪಿಜೆ, ಸ್ನೈಪರ್ ರೈಫಲ್‌ಗೆ 50,೦೦೦ ರೂಪಾಯಿ,ಎಸ್‌ಎಎಂ ಮಿಸೈಲ್‌ಗೆ 40,೦೦೦ ರೂಪಾಯಿ, ಗ್ರೆನೇಡ್‌ಗೆ 2೦೦೦ ರೂಪಾಯಿ, ಮದ್ದುಗುಂಡು ಒಂದೊಂದಕ್ಕೆ ತಲಾ 1೦೦ ರೂಪಾಯಿ,ಪಿಸ್ತೂಲ್, ರಿವಾಲ್ವರ್‌ಗೆ 1೦,೦೦೦ ರೂಪಾಯಿ, ರಾಕೆಟ್‌
ಎಂದು ಅವರು ಆರೋಪಿಸಿದರು. ನಕ್ಸಲರು ಶರಣಾದಾಗ ಜನರಿಗೆ ವಿಶ್ವಾಸ ಬರಬೇಕು. ನಕ್ಸಲರ
ಶರಣಾಗತಿಯ ಬಗ್ಗೆ ಜನರಿಗೆ ವಿಶ್ವಾಸವಿಲ್ಲ. ಶರಣಾಗತಿಯ ಬಗ್ಗೆ ಗೃಹಸಚಿವರೇ ಮಾಹಿತಿಯ ಕೊರತೆಯಿದ್ದ ಹಾಗೆ ಉಲ್ಟಾ-ಪಲ್ಟಾ ಮಾತನಾಡುತ್ತಾರೆ. ಶರಣಾದ ನಕ್ಸಲರು ನಾಗರಿಕ ಸಮಾಜದ ಮೇಲೆ ಪ್ರಭಾವ ಬೀರುವ ಅಪಾಯವಿದೆ ಎಂದು ಅಣ್ಣಾಮಲೈ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular