ಮುಂಬೈ : ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾದ ರಿಲಯನ್ಸ್ ಜಿಯೋ ಸುಧಾರಿತ೫ ಜಿಗಿಂತ ವೇಗದ 5.5 ಜಿ ಗೆ ಚಾಲನೆ ನೀಡಲು ತಯಾರಿಯಾಗಿದೆ. 10 ಜಿಬಿ ವೇಗದಲ್ಲಿ ಡೌನ್ಲೋಡ್, 1 ಜಿಬಿ ವೇಗದಲ್ಲಿ ಅಪ್ಲೋಡ್ ಆಗಲಿದೆ ಎಂಬ ಮಾಹಿತಿ ದೊರೆತಿದೆ. ಆ ಮೂಲಕ 10 ಜಿಬಿ ಯಷ್ಟು ಸೂಪರ್ ಫಾಸ್ಟ್ ಇಂಟರ್ನೆಟ್ ವೇಗವನ್ನು ನೀಡಲು ಮುಂದಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಜಿಯೋ 5 ಜಿ ನೆಟ್ವರ್ಕ್ 5.5 ಜಿಗೆ ಮೇಲೆತ್ತಿರುವ ಮುಖೇಶ್ ಅಂಬಾನಿ ನೇತೃತ್ವದ ಕಂಪನಿ ಈ ಮೈಲಿಗಲ್ಲು ಸೃಷ್ಟಿಸಿರುವ ಭಾರತದ ಮೊದಲ ಸಂಸ್ಥೆಯಾಗಿದೆ.
ಜಿಯೋ 5ಜಿ ನೆಟ್ವರ್ಕ್ ಸುಧಾರಿತ ಆವೃತ್ತಿಯೇ ಈ 5.5 ಜಿ. ೫ಜಿಗೆ ಹೋಲಿಸಿದರೆ ಇದು ವೇಗವಾದ ಇಂಟರ್ನೆಟ್ ಹಾಗೂ ಸುಧಾರಿತ ನೆಟ್ವರ್ಕ್ನ್ ಗ್ರಾಹಕರಿಗೆ ಒದಗಿಸುತ್ತದೆ. ಇಂಟಿಗ್ರೇಟೆಡ್ ಇಂಟೆಲಿಜೆನ್ಸ್ ವೈಶಿಷ್ಟ್ಯ ಗಳನ್ನು ಹೊಂದಿರುವ ಈ ತಂತ್ರಜ್ಞಾನ, ಏಕಕಾಲದಲ್ಲಿ ಅನೇಕ ಟವರ್ಗಳಿಗೆ ಸಂಪರ್ಕಿಸಬಹುದಾದ ಮೂರು ವಿಭಿನ್ನ ನೆಟ್ವರ್ಕ್ ಸೆಲ್ಗಳನ್ನು ಬಳ ಸುತ್ತದೆ ಹಾಗೂ ಗ್ರಾಹಕ ಸಂಪರ್ಕ ಸಾಧ್ಯತೆ ಯನ್ನು ಉತ್ತಮವಾಗಿಸುತ್ತದೆ.
ಇದರಿಂದ ಬಳಕೆದಾರರ ಡೌನ್ಲೋಡ್ ವೇಗ 10 ಜಿಬಿಪಿಎಸ್ಗೆ ಏರುತ್ತದೆ. ಅಪ್ ಲೋಡ್ ವೇಗ 1 ಜಿಬಿಪಿಎಸ್ ಹೆಚ್ಚಳವಾಗುತ್ತದೆ. 5.5ಜಿ ನೆಟ್ವರ್ಕ್ನಲ್ಲಿಯೂ ಸ್ಮಾರ್ಟ್ ಸಾಫ್ಟ್ವೇರ್ ಬಳಸಬಹುದು ಎನ್ನಲಾಗುತ್ತಿದೆ. ಇದು ಈ ನೆಟ್ವರ್ಕ್ ಅನ್ನು ಮೊದಲಿಗಿಂತ ಚುರುಕಾಗಿಸಿ ಸಂಪರ್ಕ ಹಾಗೂ ಅಂತರ್ಜಾಲ ವೇಗವನ್ನು ಹೆಚ್ಚಿಸುತ್ತದೆ.
ಏನಿದು 55 ಜಿ ನೆಟ್ವರ್ಕ್?
೫ಜಿಯ ಸುಧಾರಿತ ನೆಟ್ವರ್ಕ್ ವ್ಯವಸ್ಥೆಯೇ ಈ 5.5ಜಿ. ಇದು ೫ಜಿಗಿಂತ ಹೆಚ್ಚಿನ ವೇಗ, ಬೆಟರ್ ನೆಟ್ವರ್ಕ್ ರಿಲಯಬಿಲಿಟಿ ವಿಸ್ತೃತ ಸಂಪರ್ಕ ಹಾಗೂ ಇಂಟಿಗ್ರೆಟೆಡ್ ಇಂಟೆಲಿಜೆಂಟ್ ನಂತಹ ನವೀನ ಮತ್ತು ಸುಧಾರಿತ ಅನುಭವವನ್ನು ಜಿಯೋ ನೀಡಲಿರುವ 5.5ಜಿ ನೆಟ್ವರ್ಕ್
ನೀಡುತ್ತದೆ.
5.5 ಜಿಯ ಮೊದಲ ಫೋನ್ ಒನ್ಪ್ಲಸ್ ಒನ್ಪ್ಲಸ್ನ ೧೩ನೇ ಸರಣಿ ಮೊಬೈಲ್ ಫೋನ್ಗಳು ಭಾರತದಲ್ಲಿ 5.5 ಜಿ ಅನ್ನು ಒಳಗೊಂಡಿರುವ ಮೊದಲ ಸಾಧನಗಳಾಗಿರಲಿವೆ. ಈ ಮೊಬೈಲ್ಗಳು ಎಐ, ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಎಲೀಟ್ ಚಿಪ್ಸೆಟ್ ಮತ್ತು ಹೊಸ ಸಿಲಿಕಾನ್ ನ್ಯಾನೊಸ್ಟ್ಯಾಕ್ ಬ್ಯಾಟರಿಯಂತಹ ಹಲವು ಸುಧಾರಿತ ವೈಶಿಷ್ಟ್ಯ ಗಳನ್ನು ಹೊಂದಿವೆ.