Tuesday, February 4, 2025
Flats for sale
Homeಜಿಲ್ಲೆಮಂಗಳೂರು : ವೆಸ್ಟ್ ಕೋಸ್ಟ್ ಜ್ಯುವೆಲ್ಸ್ ಗೆ 25ನೇ ವರ್ಷದ ಸಂಭ್ರಮ,ತನಿಷ್ಕ್ ಆಭರಣ ಮಳಿಗೆಯಲ್ಲಿ ವಜ್ರಾಭರಣ...

ಮಂಗಳೂರು : ವೆಸ್ಟ್ ಕೋಸ್ಟ್ ಜ್ಯುವೆಲ್ಸ್ ಗೆ 25ನೇ ವರ್ಷದ ಸಂಭ್ರಮ,ತನಿಷ್ಕ್ ಆಭರಣ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ.!

ಮಂಗಳೂರು : ವೆಸ್ಟ್ ಕೋಸ್ಟ್ ಜ್ಯುವೆಲ್ಸ್ 25ನೇ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಬೆಂದೂರ್ ವೆಲ್ ನಲ್ಲಿರುವ ತನಿಷ್ಕ್ ಆಭರಣ ಮಳಿಗೆಯಲ್ಲಿ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ನಾನು ವೆಸ್ಟ್ ಕೋಸ್ಟ್ ಮತ್ತು ತನಿಷ್ಕ್ ನ ಎಲ್ಲ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಸಮರ್ಪಿಸುತ್ತೇನೆ. ದೀರ್ಘ ಕಾಲ ವಿಶ್ವಾಸ ಮತ್ತು ಬದ್ಧತೆಯಿಂದ ಗ್ರಾಹಕ ಸ್ನೇಹಿಯಾಗಿರುವ ಈ ಆಭರಣ ಮಳಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನರನ್ನು ತಲುಪಲಿ. ಗ್ರಾಹಕರ ದುಡ್ಡಿಗೆ ಸರಿಯಾದ ಮೌಲ್ಯವನ್ನು ನೀಡುವ ಮೂಲಕ ಜನರ ಪ್ರೀತಿಗೆ ಈ ಮಳಿಗೆ ಪಾತ್ರವಾಗಿದೆ. ವ್ಯಾಪಾರದ ಜೊತೆಗೆ ಸಮಾಜಪರ ಕಾಳಜಿಯುಳ್ಳ ಇದರ ಪಾಲುದಾರರು ಮುಂದೆ ಇನ್ನಷ್ಟು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಳ್ಳಲಿ“ ಎಂದು ಶುಭ ಹಾರೈಸಿದರು.

ಉದ್ಯಮಿ ರೋಹನ್ ಮೊಂತೇರೋ ಮಾತಾಡಿ, ”ಮಂಗಳೂರಿನಲ್ಲಿ ಕಳೆದ 25 ವರ್ಷಗಳಿಂದ ವ್ಯವಹಾರ ಮಾಡಿಕೊಂಡಿರುವ ತನಿಷ್ಕ್ ಜನರ ಮನ್ನಣೆಗೆ ಪಾತ್ರವಾಗಿದೆ. ಇಷ್ಟು ಸುದೀರ್ಘ ಕಾಲ ಜನರ ಸೇವೆ ಮಾಡುವುದು ಸುಲಭದ ಮಾತಲ್ಲ. ಮಂಗಳೂರಿಗೆ ಬಹಳಷ್ಟು ಕೊಡುಗೆಯನ್ನು ನೀಡಿರುವ ಈ ಸಂಸ್ಥೆಯು ಇನ್ನಷ್ಟು ಬೆಳಗಲಿ“ ಎಂದರು.

ಚಿತ್ರನಟಿ ವಿನ್ಸಿಟಾ ಡಯಾಸ್ ಮಾತಾಡಿ, ”ತನಿಷ್ಕ್ ಅತ್ಯುತ್ತಮ ಡೈಮಂಡ್ ಸಂಗ್ರಹವನ್ನು ಒಳಗೊಂಡಿದೆ. ಇಲ್ಲಿನ ಸಿಬ್ಬಂದಿ ಗ್ರಾಹಕ ಸ್ನೇಹಿಯಾಗಿದ್ದು ಮಂಗಳೂರಿನ ಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ“ ಎಂದರು.

ಈ ಸಂದರ್ಭದಲ್ಲಿ ಪಾಲುದಾರರಾದ ಇಸ್ಮಾಯಿಲ್, ರಫೀಕ್, ಖಾದರ್, ಬ್ರಾಂಚ್ ಮೆನೇಜರ್ ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular