ಮಂಗಳೂರು : ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಿದಾಗ ಸೀ ಬರ್ಡ್ ಬಸ್ ನಲ್ಲಿ ತಿಗಣೆ ಕಾಟದಿಂದ ಹಿಂಸೆ ಅನುಭವಿಸಿದ ಹಿನ್ನೆಲೆ ಖಾಸಗಿ ಬಸ್ ಹಾಗೂ ರೆಡ್ ಬಸ್ ಗೆ ನ್ಯಾಯಾಲಯ ದಂಡ ವಿಧಿಸಿದ ಘಟನೆ ವರದಿಯಾಗಿದೆ.
ರೆಡ್ ಬಸ್ ಅ್ಯಪ್ ಮೂಲಕ ದೀಪಿಕಾ ಸುವರ್ಣ ಎಂಬವರು ಬಸ್ ಟಿಕೇಟ್ ಬುಕ್ ಮಾಡಲಾಗಿದ್ದು ಪತಿ ಶೋಭರಾಜ್ ಪಾವೂರು ಜೊತೆಯಲ್ಲಿ ಕಿರುತೆರಯಲ್ಲಿ ಪ್ರಸಿದ್ಧಿ ಪಡೆದಿದ್ದ ರಾಜಾರಾಣಿ ರಿಯಾಲಿಟಿ ಶೋಗೆ ದೀಪಿಕಾ ಸುವರ್ಣ ಭಾಗವಹಿಸಲು ಹೊರಟಿದ್ದರು. ರಿಯಾಲಿಟಿ ಶೋಗೆ ತೆರಳುವಾಗ ಬಸ್ ನಲ್ಲಿ ತಿಗಣೆ ಕಚ್ಚಿದ್ದು ಇದರಿಂದ ಶೋಗಾಗಿ ತಯಾರಿ ಮಾಡಲು ಆಗದೆ ಹಿಂಸೆ ಅನುಭವಿಸಿದ್ದು ರಿಯಾಲಿಟಿ ಶೋದಲ್ಲಿ ಸಿಗುವ ಸಂಭಾವನೆಗೂ ಹೊಡೆತ ಬಿದ್ದಿತ್ತು. ಬಸ್ ನಲ್ಲಿ ತಿಗಣೆ ಕಾಟಕ್ಕೆ ಹೈರಾಣಾಗಿದ್ದ ಪ್ರಯಾಣಿಕರು ಸೀಬರ್ಡ್ ಬಸ್ ಹಾಗೂ ರೆಡ್ ಬಸ್ ವಿರುದ್ದ ಗ್ರಾಹಕ ನ್ಯಾಯಾಲಯದಲ್ಲಿ ದೂರು ನೀಡಲಾಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ.ಜಿಲ್ಲಾ ಗ್ರಾಹಕ ನ್ಯಾಯಾಲಯವು ಸೀ ಬರ್ಡ್ ಬಸ್ ಹಾಗೂ ರೆಡ್ ಬಸ್ ಗೆ 1 ಲಕ್ಷ ಪರಿಹಾರ, 18650 ದಂಡ, 850 ಟಿಕೇಟ್ ಹಣ ಹಾಗೂ ಕಾನೂನು ಸಮರದ 10 ಸಾವಿರ ನೀಡಲು ಆದೇಶ ಹೊರಡಿಸಿದೆ.
ದೂರುದಾರರ ಪರ ನ್ಯಾಯವಾದಿ ಚಿದಾನಂದ ಕೆದಿಲಾಯ ಅವರು ವಾದಿಸಿದ್ದು ನ್ಯಾಯಾಲಯ ಆದೇಶಿಸಿದ ದಂಡದಿಂದ ಇನ್ನಿತರ ಬಸ್ ಮಾಲೀಕರಿಗೆ ದಿಗಿಲು ಬಡಿದಂತಾಗಿದೆ .


