ಬೀದರ್ : ರಾಜಕೀಯ ವ್ಯಕ್ತಿಗಳ ಕೈಗೊಂಬೆಯಂತೆ ವರ್ತಿಸುತ್ತದೆಯೆಂದು ಪೋಲೀಸರ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮನೆಗೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿದ್ದು ಜೊತೆಯಲ್ಲಿ ಪೊಲೀಸರು ಮನೆಗೆ ಬಂದ ಹಿನ್ನೆಲೆ ಪೊಲೀಸರನ್ನು ಹೊರಕಳಿಸುವಂತೆ ಮೃತನ ಕುಟುಂಬ ಆಗ್ರಹಿಸಿದೆ.
ಈಶ್ವರ್ ಖಂಡ್ರೆ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಪೊಲೀಸರ ವಿರುದ್ಧ ಸಚಿನ್ ಕುಟುಂಬದಸ್ಥರು ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ಮೇಲೆ ಸಚಿನ್ ಅಕ್ಕಂದಿರು ಮುಗಿಬಿದ್ದು ಮನೆಯಿಂದ ಹೊರಹಾಕಿದ್ದಾರೆ.
ಪೊಲೀಸರ ನ್ಯಾಯ ಕೊಡಲು ವಿಫಲರಾಗಿದ್ದಾರೆ ಕೂಡಲೇ ಹೊರಹೋಗಬೇಕು ಪೊಲೀಸರು ಮನೆ ಹೊರ ಹೋಗಬೇಕು, ಒಬ್ಬರು ಪೊಲೀಸರು ಮನೆಗೆ ಕಾಲಿಡೋದು ಬೇಡ ಎಂದು ಆಕ್ರೋಶ ಹೊರಹಾಕಿದ್ದು ಪೊಲೀಸ್ ಇಲಾಖೆಗೆ ಮುಖಭಂಗವಾಗಿದೆ.
ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಜೊತೆಗೆ ಸಚಿನ್ ಮನೆಗೆ ಆಗಮಿಸಿದ ಬೀದರ್ ಎಸ್.ಪಿ ಪ್ರದೀಪ್ ಗುಂಟಿ ಜೊತೆಯಲ್ಲಿ ಬಂದಿದ್ದು ಎಸ್.ಪಿ ಪ್ರದೀಪ್ ಗುಂಟಿ ನೋಡುತ್ತಿದ್ದಂತೆ ಕುಟುಂಬಸ್ಥರು ಸಿಟ್ಟಿಗೆದ್ದಿದ್ದಾರೆ. ಪೊಲೀಸರು ಬೇಕಾಗಿಲ್ಲ ಎಂದು ಎಸ್.ಪಿ ಯನ್ನು ಮನೆಯಿಂದ ಕುಟುಂಬಸ್ಥರು ಆಚೆ ಕಳುಹಿಸಿದ್ದಾರೆ.ಸಚಿನ್ ಕಟುಂಬಸ್ಥರು ಸಿಟ್ಟಿಗೆದ್ದಿದ್ದನ್ನು ಕಂಡು ಮನೆಯಿಂದ ಎಸ್.ಪಿ ಪ್ರದೀಪ್ ಗುಂಟಿ. ಆಚೆ ನಡೆದು ಮಾನ ಉಳಿಸಿದ್ದಾರೆಂದು ತಿಳಿದುಬಂದಿದೆ.
ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ್ ಗ್ರಾಮದ ಮೃತನ ಮನೆ ಮುಂದೆ ಸಚಿವ ಖಂಡ್ರೆ ಹೇಳಿಕೆ ನೀಡಿದ್ದು ಸಚಿನ್ ಆತ್ಮಹತ್ಯೆ ನೋವು ಹಾಗು ದುಖಃದ ವಿಚಾರ, ಮನೆಗೆ ಆಧಾರ ಸ್ತಂಭವಾಗಿದ್ದ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ನಾನು ಹಾಗೂ ನಮ್ಮ ಸರ್ಕಾರ ಸರ್ಕಾರ ದುಖಃ ತಪ್ತ ಕುಟುಂಬದ ಜೊತೆಗೆ ಇದ್ದೇವೆ. ಈಗಾಗಲೇ ಪರವಾರದ ಜೊತೆ ಸುದೀರ್ಘ ಸಮಾಲೋಚನೆ ಮಾಡಿದ್ದೇನೆ. ಪ್ರಮುಖವಾಗಿ ಸಚಿನ್ ಆತ್ಮಹತ್ಯೆ ಮಾಹಿತಿ ಬಂದಾಗ ಪೊಲೀಸರು ದೂರು ತೆಗೆದುಕೊಳ್ಳಬೇಕಿತ್ತು. ನಿಷ್ಪಕ್ಷಪಾತ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡದ್ದೇನೆ.ಯಾವ ಠಾಣೆ ಪೊಲೀಸರ ನಿರ್ಲಕ್ಷ್ಯ ಇದೆಯೋ ಅವರ ಮೇಲೆ ಕ್ರಮ ಆಗುತ್ತೆ.ಸಚಿನ ಆತ್ಮಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಸಿಎಂ ಜೊತೆಗೂ ಮಾತನಾಡಿದ್ದೇನೆ. ಸಾವಿಗೆ ಕಾರಣರಾದ ವಿರುದ್ದ ಕ್ರಮವಾಗುತ್ತೆ ಸಮಾಜದಲ್ಲಿ ಎಲ್ಲರಿಗೂ ಭರವಸೆ ಬರುವ ರೀತಿಯಲ್ಲಿ ಕ್ರಮವಾಗುತ್ತೆ ಎಂದು ಹೇಳಿದ್ದಾರೆ. ಬಳಿಕ ತನಿಖೆಯನ್ನು ಸಿಓಡಿಗೆ ವಹಿಸ್ತೇವೆ ಎಂದಿದ್ದು ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 10 ಲಕ್ಷ ಪರಿಹಾರ ನೀಡುತ್ತೆವೆ ಎಂದು ಹೇಳಿದ್ದಾರೆ.


