ಶಿವಮೊಗ್ಗ : ಸಂಜೆ 6-30 ರ ವೇಳೆಗೆ ರೈಸ್ ಮಿಲ್ ನಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ ಎಂದು ಭದ್ರಾವತಿಯಲ್ಲಿ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.
ಈ ಘಟನೆಯಲ್ಲಿ ಏಳು ಜನ ಗಂಭೀರ ಗಾಯಗೊಂಡಿದ್ದಾರೆ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಓರ್ವ ಸ್ಪೋಟಗೊಂಡ ಸ್ಥಳದಲ್ಲಿ ಓರ್ವ ಮಿಸ್ಸಿಂಗ್ ಆಗಿದ್ದಾನೆ. ಮಿಸ್ಸಿಂಗ್ ಆದ ರಘು ಎನ್ನುವನ ಹುಟುಕಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ಸ್ಫೋಟಗೊಂಡ ಹಿನ್ನಲೆ ಸಾಕಷ್ಟು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು ಒಂದೆರೆಡು ಮನೆಗಳಿಗೆ ಸಹ ಹಾನಿ ಆಗಿದೆ ಎಂದರು.ವಿದ್ಯುತ್ ವ್ಯತ್ಯಯ ಆಗಿದ್ದು ಇವತ್ತು ಕೆಲವು ಕಡೆ ವಿದ್ಯುತ್ ಇರುವುದಿಲ್ಲ ಸ್ಥಳದಲ್ಲಿ ಅಗ್ನಿಶಾಮಕದಳ ಸಿಬ್ಬಂದಿ ಸೇರಿ ಪೊಲೀಸರು ಕಾರ್ಯಚರಣೆ ಮಾಡುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.