Sunday, July 13, 2025
Flats for sale
Homeಜಿಲ್ಲೆಮಂಗಳೂರು ; ನಾಳೆ ಡಿ.15ರಂದು ಕದ್ರಿಪಾರ್ಕ್‌ನಲ್ಲಿ ಬೃಹತ್ ವೈನ್ ಮೇಳ..!

ಮಂಗಳೂರು ; ನಾಳೆ ಡಿ.15ರಂದು ಕದ್ರಿಪಾರ್ಕ್‌ನಲ್ಲಿ ಬೃಹತ್ ವೈನ್ ಮೇಳ..!

ಮಂಗಳೂರು : ನಗರದ ಕದ್ರಿ ಪಾರ್ಕ್‌ನಲ್ಲಿ ಕಳೆದ ವಾರ ನಡೆದ ವೈನ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಡಿ.15ರಂದು ಮತ್ತೆ ಮೇಳ ಆಯೋಜಿಸಲಾಗಿದೆ.
ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ (ಸರ್ಕಾರಿ ಸ್ವಾಮ್ಯದ ಸಂಸ್ಥೆ), ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಬೆಳಗ್ಗೆ 10.30ರಿಂದ ರಾತ್ರಿ 9.30 ಗಂಟೆ ತನಕ ವೈನ್ ಮೇಳ ನಡೆಯಲಿದೆ.

ದ್ರಾಕ್ಷಾ ರಸದ ಉಪಯೋಗಗಳು, ಸವಿಯುವ ಕ್ರಮ ಮುಂತಾದ ಸೂಕ್ತ ಮಾಹಿತಿಗಳೊಂದಿಗೆ ಬ್ರಾೃಂಡುಗಳ ಪ್ರದರ್ಶನ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪನ್ನಗಳು, ಎಲ್ಲಾ ಕಂಪನಿಗಳ ಹೊಸ ಹೊಸ ಪಾನೀಯಗಳನ್ನು ಪ್ರದರ್ಶಿಸಿ ಪರಿಚಯಿಸುವ ಹಾಗೂ ದ್ರಾಕ್ಷಾ ರಸದ (ವೈನ್ ) ರುಚಿಯನ್ನು ಸವಿದು ಬೇಕಾದ ರೀತಿಯಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ದ್ರಾಕ್ಷಾ ರಸ ಉತ್ಪಾದಕ ಸಂಸ್ಥೆಗಳ ಮೂಲಕ ಅತ್ಯಾಕರ್ಷಕ ದರ ಹಾಗೂ ಅತ್ಯುತ್ತಮ ಕೊಡುಗೆಗಳೊಂದಿಗೆ ಮೇಳ ಏರ್ಪಡಿಸಲಾಗಿದೆ.

ಮೇಳದಲ್ಲಿ ಟ್ರಾೃಕ್ ಮ್ಯೂಸಿಕ್ ಏರ್ಪಡಿಸಲಾಗಿದೆ. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕುಟುಂಬ ಸಮೇತರಾಗಿ ಬಂದು ರಜಾ ದಿನವನ್ನು ಇಲ್ಲಿ ಕಳೆಯಲು ಅವಕಾಶ ಕಲ್ಪಿಸಲಾಗಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಆಗಮಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಸಂಘಟಕರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular