Saturday, December 14, 2024
Flats for sale
Homeರಾಜ್ಯಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ : 7 ತಿಂಗಳ ಬಳಿಕ ನಟ ದರ್ಶನ್‌ ಸೇರಿ...

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ : 7 ತಿಂಗಳ ಬಳಿಕ ನಟ ದರ್ಶನ್‌ ಸೇರಿ 7 ಆರೋಪಿಗಳಿಗೂ ಜಾಮೀನು ಮಂಜೂರು ..!

ಬೆಂಗಳೂರು : ನಟ ದರ್ಶನ್ ಸೇರಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ಎ1 ಪವಿತ್ರಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ 12 ಲಕ್ಷ್ಮಣ್, ಎ 11ನಾಗರಾಜ್, ಎ 14 ಪ್ರದೋಷ್​ಗೆ ಜಾಮಿನು ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ ಅವರಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.ದರ್ಶನ್ ಅವರು ಈಗಾಗಲೇ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಇದೀಗ ಅವರಿಗೆ ಪೂರ್ಣಾವಧಿಗೆ ಜಾಮೀನು ಮಂಜೂರು ಆಗಿದೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ದರ್ಶನ್​ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಜಾಮೀನು‌ ಹಿನ್ನಲೆ ಚಿತ್ರದುರ್ಗದಲ್ಲಿ ರೇಣುಕಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಹಿಸಿದ್ದು ಪ್ರಾರಂಭದಲ್ಲಿ ಈಗ ಜಮೀನು ನೀಡಿದ್ದರೂ ತೀರ್ಪಲ್ಲಿ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.ಆರೋಪಿಗಳಿಗೆ ಜಾಮೀನಾಗಿದೆ ಎಂದು ಮಾದ್ಯಮಗಳ‌ಮೂಲಕ ತಿಳಿತು. ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ, ಅದರ ತೀರ್ಮಾನಕ್ಕೆ ಬದ್ದ ಎಂದರು.

ಮುಂದೆ ದರ್ಶನ್ ನಿಮ್ಮ ಮನೆಗೆ ಬಂದ್ರೆ ಎಂಬ ಪ್ರಶ್ನೆಗೆ ಪ್ರತಿಕ್ರಿಹಿಸಿದ ಅವರು ನಮ್ಮ ಮನೆಗೆ ಬಂದರೆ ಎಂಬ ವೀಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಮ್ಮ ಮಗನನ್ನ ಕಳಕಂಡಿದಿವಿ ದರ್ಶನ್ ಬರುವುದು ಬೇಕಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಬೇಕಿದೆ ಎಂದು ರೇಣುಕಾ ಸ್ವಾಮಿ ತಂದೆ ಶಿವನಗೌಡರು ಪ್ರತಿಕ್ರಿಹಿಸಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular