ಹೈದರಾಬಾದ್ ; ಹೈದರಾಬಾದ್ನಲ್ಲಿ ನಡೆದ ಪುಷ್ಪ 2 ಚಿತ್ರದ ಪ್ರಥಮ ಪ್ರದರ್ಶನದಲ್ಲಿ ಕಾಲ್ತುಳಿತದ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಕುಟುಂಬಸ್ಥರು ಪ್ರಕರಣ ದಾಖಲಿಸಿದ ಕೆಲವೇ ದಿನಗಳಲ್ಲಿ, ತೆಲುಗು ಚಲನಚಿತ್ರ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
BNS ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ ಶಿಕ್ಷೆ) ಮತ್ತು 118(1) r/w 3 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕೇಂದ್ರ ವಲಯದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಕ್ಷಾಂಶ್ ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೃತರ ಕುಟುಂಬದ ಸದಸ್ಯರ ದೂರಿನ ಆಧಾರದ ಮೇಲೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ (ಸ್ವಯಂಪ್ರೇರಿತವಾಗಿ ಗಾಯ ಅಥವಾ ಘೋರವಾದ ಗಾಯವನ್ನು ಉಂಟುಮಾಡುವುದು). ಪ್ರಕರಣ ದಾಖಲಾಗಿತ್ತು .
ಹೈದರಾಬಾದ್ ನಿವಾಸದಲ್ಲಿ ಬಂಧಿಸಿರುವ ಚಿಕ್ಕಡಪಲ್ಲಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಂಧನ ಪ್ರಕ್ರಿಯೆಯನ್ನು ಮುಗಿಸಿ ಕೋರ್ಟ್ಗೆ ಹಾಜರುಪಡಿಸಲು ಸಿದ್ಧತೆ ನಡೆಸ್ತಿದ್ದಾರೆ. ಅಂತೆಯೇ ಗಾಂಧಿ ಉಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ. ನಂತರ ನಾಂಪಳ್ಳಿ ಕೋರ್ಟ್ ಮುಂದೆ ಅಲ್ಲು ಅರ್ಜುನ್ ಅವರನ್ನು ಹಾಜರುಪಡಿಸಲಿದ್ದಾರೆ.
ನಂತರ ಪೊಲೀಸರು ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಅಲ್ಲು ಅರ್ಜುನ್ನನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿಕೊಳ್ಳಲಿದ್ದಾರೆ. ಒಂದು ವೇಳೆ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದರೆ ಜೈಲೇ ಗತಿ ಆಗಲಿದೆ. ಹೈದರಾಬಾದ್ನ ಚಂಚಲಗೂಡ ಜೈಲಿಗೆ ಪೊಲೀಸರು ಕಳುಹಿಸುತ್ತಾರೆ.