Sunday, July 13, 2025
Flats for sale
Homeರಾಜಕೀಯನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ : ಧನಕರ್ ವಿರುದ್ಧ ಗೊತುವಳಿಗೆ ವಿಪಕ್ಷ...

ನವದೆಹಲಿ : ಉಪರಾಷ್ಟ್ರಪತಿ ಜಗದೀಪ್ ಧನಕರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ : ಧನಕರ್ ವಿರುದ್ಧ ಗೊತುವಳಿಗೆ ವಿಪಕ್ಷ ಸಜ್ಜು ..!

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ. ಹೀಗಾಗಿ ಉಪರಾಷ್ಟ್ರಪತಿ ಪದವಿಯಿಂದ ಅವರನ್ನು ಕಿತ್ತುಹಾಕಬೇಕೆಂದು ಒತ್ತಾಯಿಸುವ ಗೊತ್ತುವಳಿ ಯನ್ನು ಇಂಡಿಯಾ ಮಿತ್ರಕೂಟದ ನಾಯಕರು ಈಗ ಸದನದಲ್ಲಿ ಮಂಡಿಸಲು ಸಜ್ಜಾಗಿದ್ದಾರೆ.

ಈ ಸಂಬAಧ ಕರಡು ಗೊತ್ತುವಳಿಯನ್ನು ಕಳೆದ ಆಗಸ್ಟ್ನಲ್ಲಿಯೇ ಪ್ರತಿಪಕ್ಷ ನಾಯಕರು ತಯಾರಿಸಿದ್ದರೂ ಧನಕರ್‌ಗೆ ಮತ್ತೊಂದು ಅವಕಾಶ ನೀಡಿದ್ದರು. ಆದರೆ ಸೋಮವಾರ ಸಂಸತ್ತಿನಲ್ಲಿ ಅಮೆರಿಕದ ಬಿಲಿಯಾಧಿಪತಿ ಜಾರ್ಜ್ ಸೊರೊಸ್‌ಗೂ ಕಾಂಗ್ರೆಸ್ ನಾಯಕಿ ಸೋನಿಯಾ ಸೇರಿದಂತೆ ಹಲವರಿಗೆ ನಂಟು ಇದೆ ಎಂದು ಬಿಜೆಪಿ ನಾಯಕರು ಆರೋಪಿಸಿರುವುದು ಇಂಡಿಯಾ ಮಿತ್ರಕೂಟದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಆರೋಪದ ಬೆನ್ನಲ್ಲೇ ಎರಡೂ ಸದನಗಳಲ್ಲಿ ಪ್ರತಿಪಕ್ಷಗಳ ಗದ್ದಲದಿಂದ ಕಲಾಪಕ್ಕೆ ಹಲವಾರು ಬಾರಿ ಉಂಟಾಯಿತು. ಇದೇ ವೇಳೆ ಪ್ರತಿಪಕ್ಷಗಳು ಅದಾನಿಯನ್ನು ಗುರಿಯಾಗಿರಿಸಿಕೊಂಡು ಎನ್‌ಡಿಎ ಸರ್ಕಾರಕ್ಕೆ ಸೆಡ್ಡುಹೊಡೆದಿವೆ.

ರಾಜ್ಯಸಭೆಯಲ್ಲಿ ಸಭಾಪತಿಯವರು ಆಡಳಿತಾರೂಢ ಬಿಜೆಪಿ ಸದಸ್ಯರಿಗೆ ಮಾತ್ರ ಪ್ರತಿಪಕ್ಷ ನಾಯಕರನ್ನು ಗುರಿಯಾಗಿರಿಸಿರುವ ವಿವಾದಾತ್ಮಕ ಹೇಳಿಕೆ ನೀಡಲು ಅವಕಾಶ ನೀಡುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಅಂತಹ ಅವಕಾಶವನ್ನೇ ನೀಡುತ್ತಿಲ್ಲ ಎಂದು ಇAಡಿಯಾ ನಾಯಕರು ಆರೋಪಿಸು ತ್ತಿದ್ದಾರೆ. ಹೀಗಾಗಿ
ಕಳೆದೆರಡು ದಿನಗಳಿಂದ ಧನಕರ್ ಹಾಗೂ ಪ್ರತಿಪಕ್ಷಗಳ ನಡುವಣ ಬಾಂಧವ್ಯ ತೀವ್ರ ಹದಗೆಟ್ಟಿದೆ.

ಸಂವಿಧಾನದ ೬೭ನೇ ಪರಿಚ್ಛೇದದಡಿ ಈ ಗೊತ್ತುವಳಿಯನ್ನು ಮಂಗಳವಾರದಂದು ಪ್ರತಿಪಕ್ಷ ನಾಯಕರು ಸಲ್ಲಿಸುವ ಸಾಧ್ಯತೆ ಇದೆ. ಆದರೆ ಗೊತ್ತುವಳಿ ಚರ್ಚೆಗೆ ಬರಲು 14 ದಿನಗಳ ನೋಟಿಸ್ ನೀಡುವ ಅಗತ್ಯವಿದೆ. ಹೀಗಾಗಿ ಹಾಲಿ ಅಧಿವೇಶನದಲ್ಲಿ ಇಂಥ ಗೊತ್ತುವಳಿ ಚರ್ಚೆಗೆ ಬರುವ ಸಂಭವವಿಲ್ಲ. ಇAಡಿಯಾ ಮಿತ್ರಕೂಟವು ಧನಕರ್ ಅವರನ್ನು ವಾಗ್ದಂಡನೆ ಮೂಲಕ ಅಧಿಕಾರದಿಂದ ಕಿತ್ತುಹಾಕಲು ಸಹಿಸಂಗ್ರಹ ಅಭಿಯಾನ
ನಡೆಸಿತ್ತು. ಆದಾಗ್ಯೂ ಅವರಿಗೆ ಮಿತ್ರಕೂಟವು ಮತ್ತೊಂದು ಅವಕಾಶ ನೀಡಿತ್ತು. ಆದರೀಗ ಸೋಮವಾರ ಧನಕರ್ ತೋರಿದ ನಡವಳಿಕೆ ನಂತರ ಅವರ ವಿರುದ್ಧ ಕ್ರಮ ಕೈಗೊಳ್ಳದ ಹೊರತು ಅನ್ಯ ಮಾರ್ಗವಿಲ್ಲ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular