ವಿಜಯಪುರ : ಜಿಲ್ಲೆಯ ತಾಳಿಕೋಟಿ ಹತ್ತಿರ ಬಿಳೆಭಾವಿ ಗ್ರಾಮದ ಬಳಿ ಕಾರು ಹಾಗೂ ಕಬ್ಬು ಕಟಾವು ಮಷೀನ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಐದು ಜನ ಸಾವನಪ್ಪಿದ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ಯಿಂದ ತಾಳಿಕೋಟೆಗೆ ಕಾರು ಬರುತ್ತಿದ್ದು ಈ ವೇಳೆ ಹುಣಸಗಿ ಕಡೆಗೆ ಹೊರಟಿದ್ದ ಕಬ್ಬು ಕಟಾವು ಮಷಿನ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು ಸಾವನ್ನಪ್ಪಿದವರಲ್ಲಿ ಇಬ್ಬರು ಮಹಿಳೆಯರು, 3 ಜನ ಪುರುಷರು ಎಂದು ತಿಳಿದಿದೆ. ಮೃತರನ್ನ ವಿಜಯಪುರ ತಾಲೂಕು ಅಲಿಯಾಬಾದ್ ನಿವಾಸಿಗಳು ಎನ್ನಲಾಗಿದ್ದು ಮೃತರ ಬಗ್ಗೆ ಮಾಹಿತಿ ಇನ್ನಷ್ಟೇ ತಿಳಿಯಬೇಕಾಕಿದೆ.
ಮೃತದೇಹಗಳು ಸಿಲುಕಿದ್ದು, ಅವುಗಳನ್ನ ಹೊರ ತೆಗೆಯಲು ಪೊಲೀಸರು ಪರದಾಡುತ್ತಿದ್ದು.ಸ್ಥಳಕ್ಕೆ ತಾಳಿಕೋಟೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.