ನವದೆಹಲಿ : ಏಷ್ಯಾದ ಶ್ರೀಮಂತ ಉದ್ಯಮಿಗಳಲ್ಲಿ ಗೌತಮ್ ಅದಾನಿ ಹೆಸರು ಕೂಡ ಕೇಳಿರುತ್ತೇವೆ. ಅದಾನಿ ಸಂಸ್ಥೆ ಭಾರತದಲ್ಲೇ ಅತೀ ದೊಡ್ಡ ಇಕೋ ಸಿಸ್ಟಂ ಉದ್ಯಮ ಹೊಂದಿದೆ. ಪ್ರತಿಯೊಂದು ರಂಗದಲ್ಲೂ
ಅವರು ಒಂದೊAದು ಸಂಸ್ಥೆ ಕಟ್ಟಿದ್ದಾರೆ. ಅದಾನಿ ಬಹಳ ಸರಳವಾಗಿ ಕಾಣಿಸಿಕೊಳ್ಳುತ್ತಾರೆ. ಭಾರತದಲ್ಲಿ ಮುಖೇಶ್ ಅಂಬಾನಿ ಬಿಟ್ಟರೆ ಅದಾನಿ ಹೆಸರು ಎಲ್ಲಾ ವಲಯದಲ್ಲೂ ಕೇಳಿಬರುತ್ತದೆ. ಹಾಗೆ ಅಂತಾರಾಷ್ಟಿçÃಯ
ಮಾರುಕಟ್ಟೆಯಲ್ಲೂ ಕೂಡ ನಿಮಗೆ ಅದಾನಿ ಹೆಸರು ಕೇಳಿಬರುತ್ತಲೇ ಇರುತ್ತದೆ.
ಆದ್ರೆ ಇತ್ತೀಚಿಗೆ ಅಮೆರಿಕದಿಂದ ಭ್ರಷ್ಟಾಚಾರ ಹಾಗೂ ವಂಚನೆಯ ದೋಷಾರೋಪ ಕುರಿತುಸುದ್ದಿಯಾಗಿದ್ದಾರೆ. ತಮ್ಮ ಗ್ರೀನ್ ಎನರ್ಜಿ ಸೌರ ಶಕ್ತಿ ಕಂಪನಿಗೆ ಗುತ್ತಿಗೆ ನೀಡುವ ಸಂಬAಧ ಭಾರತೀಯ ಅಧಿಕಾರಿಗಳಿಗೆ ಲಂಚ
ನೀಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಇನ್ನು ಅದಾನಿ ಅವರ ಆಸ್ತಿ ವರ್ಷದಿಂದ ವರ್ಷ ಹೆಚ್ಚುತ್ತಲೇ ಇದೆ. ಅವರ ಐಷಾರಾಮಿ ಬದುಕಿನ ಬಗ್ಗೆ ನಿಮಗೆ ತಿಳಿದಿರಬಹುದು. ಮುಂಬೈನಲ್ಲಿ ಗಗನ ಚುಂಬಿ ಕಟ್ಟಡ, ಐಷಾರಾಮಿ ಕಾರುಗಳು ಅವರ ಬಳಿ ಇವೆ. ಹಾಗೆ ಅವರ ಲವ್ ಸ್ಟೋರಿ ಕೂಡ ಇದೆ. ಅವರ ಪತ್ನಿ ಪ್ರೀತಿ, ಇಬ್ಬರದ್ದು ಒಂದು ರೀತಿಯ ಪ್ರೇಮ ವಿವಾಹ. ಗೌತಮ್ ಅದಾನಿ ಅವರ ಪ್ರೇಮಕಥೆ ಕೂಡ ತುಂಬಾ ಸರಳವಾಗಿದೆ. ಅರ್ಯನ್ ಭಾಸ್ಕರ್ ಅವರು ಬರೆದಿರುವ ‘ಗೌತಮ್ ಅದಾನಿ: ರೀಮೇಜಿನಿಂಗ್ ಬ್ಯುಸಿನೆಸ್ ಇನ್ ಇಂಡಿಯಾ’ ಪುಸ್ತಕದಲ್ಲಿ ಅವರು ಅದಾನಿ ಅವರ ವಿವಾಹ ಸಂಬAಧ ಕುರಿತಂತೆ ವಿವರಣೆ ನೀಡಿದ್ದಾರೆ.
ಗೌತನ್ ಅದಾನಿಯನ್ನು ಮೊದಲು ನೋಡಿದ್ದ ಪ್ರೀತಿ, ಅದಾನಿ ಅವರನ್ನು ಇಷ್ಟ ಪಡಲಿಲ್ಲವಂತೆ. ಇದೊಂದು ಮನೆಯವರು ಮೊದಲು ನೋಡಿದ ಒಪ್ಪಿದ್ದ ಮದುವೆಯಾಗಿತ್ತಂತೆ. ಆದ್ರೆ ಪ್ರೀತಿ ಅವರು ಅದಾನಿಯವರನ್ನು
ನೋಡಿ ಈ ಹುಡುಗನ ಇಷ್ಟಪಟ್ಟಿರಲಿಲ್ಲವಂತೆ. ಬಳಿಕ ಪ್ರೀತಿ ಅವರ ತಂದೆ ಸೇವಂತಿಲಾಲ್ ಅವರು ಗೌತಮ್ ಅದಾನಿ ಅವರನ್ನು ಒಮ್ಮೆ ಭೇಟಿಯಾಗುವಂತೆ ಮಗಳಿಗೆ ಹೇಳಿದ್ದರಂತೆ. ಆಕೆ ಇನ್ನೂ ಎಂಬಿಬಿಎಸ್ ಪದವಿ ಓದುತ್ತಿದ್ದರಂತೆ ಹಾಗೆ ಅದಾನಿ ಅವರು ತನಗೆ ಸರಿಯಾದ ಜೋಡಿಯಲ್ಲ ಎಂದುಕೊಂಡಿದ್ದರಂತೆ ಬಳಿಕ ಪ್ರೀತಿ ಅವರ ತಂದೆ ಅದಾನಿ ಅವರನ್ನು ಭೇಟಿಯಾಗುವಂತೆ ಮಗಳ ಮನವೊಲಿಸುವಲ್ಲಿ ಯಶಸ್ವಿಯಾದರು, ಹಾಗೆ ಇಬ್ಬರನ್ನು ಒಂದು ಕಡೆ ಭೇಟಿಗೆ ಕಳುಹಿಸಿದ್ದರು, ಈ ನಡುವೆ ಇಬ್ಬರು ಒಟ್ಟಿಗೆ ಕೆಲ ಸಮಯ ಕಳೆದಾಗ ಪ್ರೀತಿ ಗೌತಮ್ ಅದಾನಿ ಅವರನ್ನು ಮದುವೆಯಾಗಲು ಒಪ್ಪಿಕೊಂಡರAತೆ. ಇದಾದ ಬಳಿಕ ಇಬ್ಬರು ಮೇ 1 1986 ರಲ್ಲಿ ವಿವಾಹವಾದರು.
ಮದುವೆಯ ನಂತರ ಪ್ರೀತಿ ಅದಾನಿ ಮತ್ತು ಗೌತಮ್ ಅದಾನಿ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ಅದಾನಿ ಆಗತಾನೆ ಉದ್ಯಮಕ್ಕೆ ಕಾಲಿಡುತ್ತಿದ್ದರು. ಈ ಸಮಯದಲ್ಲಿ ಇಬ್ಬರ ಮೇಲೂ ಒಂದಿಷ್ಟು ಜವಾಬ್ದಾರಿ
ಹಾಗೂ ವ್ಯವಹಾರಕ್ಕೆ ಸಂಬAಧಿಸಿದAತೆ ಕೆಲಗಳು ಹೆಚ್ಚಾಗಿದ್ದವು. ಅದಾನಿ ಕೆಲಸದ ನಿಮಿತ್ತ ಮನೆಯೊಂದ ಬಹುತೇಕ ಸಮಯ ಹೊರಗೆ ಕಳೆಯುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಪತ್ನಿ ಹಾಗೂ ಕುಟುಂಬದವರ ಜತೆ ಕಾಲ ಕಳೆಯುತ್ತಿದ್ದರು. ಪ್ರೀತಿ ಅದಾನಿ ಮತ್ತು ಗೌತಮ್ ಅದಾನಿ ದಾಂಪತ್ಯ ೩೬ ವರ್ಷ ಪೂರೈಸಿದ್ದಾರೆ.
ಹಾಗೆ ಗೌತಮ್ ಅದಾನಿ 60ನೇ ವರ್ಷದ ಹುಟ್ಟು ಹಬ್ಬ ಕೂಡ ಆಚರಿಸಿಕೊಂಡಿದ್ದಾರೆ. ಈ ನಡುವೆ ಈ ಜೊಡಿಯ ಹಳೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಬ್ಬರ ಪ್ರೀತಿ, ದಾಂಪತ್ಯ
ಇಬ್ಬರ ನಡುವಿನ ಅನ್ಯೋನ್ಯತೆ ಕುರಿತು ಈಗ ಸುದ್ದಿಯಾಗುತ್ತಿದೆ. “೩೬ ವರ್ಷದಲ್ಲಿ ದಂಪತಿ ಕಳೆದ ಕಷ್ಟದ ದಿನಗಳು, ಇಬ್ಬರ ನಡುವಿನ ಬಾಂಧವ್ಯ ಈಗ ದೊಡ್ಡ ಮಟ್ಟಕ್ಕೆ ಬೆಳೆದು ನಿಲ್ಲಲು ಸಹಕಾರಿಯಾಗಿದೆ. ಈ ನಡುವೆ ಇಬ್ಬರ ಪ್ರೀತಿ ಯಾವ ರೀತಿ ಇತ್ತು ಎಂಬುದಕ್ಕೆ ಈ ಪುಸ್ತಕ ಕೂಡ ಸಾಕ್ಷಿಯಾಗಿದೆ.
ಈ ಪುಸ್ತಕದಲ್ಲಿ ಅದಾನಿ ಅವರ ಆರಂಭಿಕ ದಿನಗಳು, ಅವರು ದೊಡ್ಡ ಉದ್ಯಮಿಯಾಗಲು ಇದ್ದ ಟರ್ನಿಂಗ್ಪಾ ಯಿAಟ್ ಕುರಿತಂತೆ ಹೇಳಲಾಗಿದೆ.