ರಾಂಚಿ : ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಕೊಂದು ೫೦ ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಖುಂಟಿ ಜಿಲ್ಲೆಯಲ್ಲಿ ನಡೆದಿದ್ದ ಭಯಾನಕ ಕೊಲೆಯ ದುಷ್ಕರ್ಮಿಯನ್ನು ನಾಯಿಗಳು ಬಹಿರಂಗಗೊಳಿಸಿದೆ.
ನಾಯಿ ಮಹಿಳೆಯ ದೇಹದ ತುಂಡನ್ನು ಕಚ್ಚಿಕೊಂಡು ಓಡುತ್ತಿರುವುದು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅದು ಮನುಷ್ಯನ ದೇಹದ ಭಾಗ ಎಂದು ಭಾವಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಮದುವೆ ವಿಚಾರದಲ್ಲಿ ಇಬ್ಬರು ಜಗಳವಾಡಿಕೊಂಡಿದ್ದಾರೆ, ಬಳಿಕ ಮಹಿಳೆಯನ್ನು ಕೊಂದು ಆತ 50 ತುಂಡುಗಳಾಗಿ ಕತ್ತರಿಸಿ ಎಸೆದಿ ಸುಮಾರು ಎರಡು ವಾರಗಳ ಹಿಂದೆ ಸಂಭವಿಸಿದ ಘಟನೆ ನವೆಂಬರ್ 24 ರಂದು ಅರಣ್ಯ ಪ್ರದೇಶದಲ್ಲಿ ಮಾನವ ಅವಶೇಷಗಳೊಂದಿಗೆ ಬೀದಿ ನಾಯಿ ಕಾಣಿಸಿಕೊಂಡ ನಂತರ ಬೆಳಕಿಗೆ ಬಂದಿದೆ.
ಆರೋಪಿಯನ್ನು ನರೇಶ್ ಭೇಂಗ್ರಾ ಎಂದು ಗುರುತಿಸಲಾಗಿದೆ ಮತ್ತು ಸಂತ್ರಸ್ತೆ ಗಂಗಿ ಕುಮಾರಿ(24) ಅವರು ಜೋರ್ಡಾಗ್ ಗ್ರಾಮದ ನಿವಾಸಿಗಳಾಗಿದ್ದರು ಆದರೆ ತಮಿಳುನಾಡಿನಲ್ಲಿ ವಾಸಿಸುತ್ತಿದ್ದರು ಮತ್ತು ಕೆಲಸ ಮಾಡುತ್ತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರಿಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು, ಆದರೆ ನರೇಶ್ ಮಹಿಳೆಗೆ ಗೊತ್ತಾಗದಂತೆ ಕುಂತಿಯಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 8 ರಂದು ಗಂಗಿಯ ಒತ್ತಾಯದ ಮೇರೆಗೆ ದಂಪತಿಗಳು ಖುಟಿಗೆ ಮರಳಿದಾಗ ಕ್ರೂರ ಘಟನೆ ನಡೆದಿದೆ. ಆದರೆ, ಆಕೆ ತನ್ನನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವಂತೆಒತ್ತಾಯಿಸಿದಾಗ ಇಬ್ಬರ ನಡುವೆ ಜಗಳ ನಡೆದಿದೆ. ಭೇಂಗ್ರಾ ತನ್ನ ಮನೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಅವಳನ್ನು ಕರೆದೊಯ್ದು ಅವಳ ದುಪಟ್ಟಾದಿಂದ ಗಂಗಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ.ನಂತರ ಅವರು ದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಿ ಕಾಡಿನಲ್ಲಿ ಎಸೆದು ಬಂದಿದ್ದ. ನವೆಂಬರ್ 24 ರಂದು, ನಾಯಿಯೊಂದು ದೇಹದ ಕೆಲವು ಭಾಗಗಳೊಂದಿಗೆ ಕಾಣಿಸಿಕೊಂಡ ನಂತರ ಪೊಲೀಸರು ಮಹಿಳೆಯ ದೇಹದ ಕೆಲವು ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಕಾಡಿನಲ್ಲಿ ಒಂದು ಚೀಲ ಸಿಕ್ಕಿತ್ತು, ಅದರಲ್ಲಿ ಗಂಗಿ ಅವರ ಆಧಾರ್ ಕಾರ್ಡ್ ಮತ್ತು ಫೋಟೋ ಸೇರಿದಂತೆ ಆಕೆಯ ಸಾಮಾನುಗಳಿದ್ದವು, ನಂತರ ಅದನ್ನು ಆಕೆಯ ತಾಯಿ ಗುರುತಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ರಕ್ತದ ಕಲೆ ಇರುವ ಕುಡುಗೋಲು ಮತ್ತು ತೋಟದ ಗುದ್ದಲಿ ಕೂಡ ಇದೆ. ಭೇಂಗ್ರಾಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು, ಮತ್ತು ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆಯನ್ನು ಕೊಲೆ ಮಾಡಿರುವುದಾಗಿ ಮತ್ತು ಆಕೆಯ ದೇಹವನ್ನು ಕತ್ತರಿಸಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಖುಂಟಿಯ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದರು ಮತ್ತು ಆತನ ವಿರುದ್ಧ ಪ್ರಕರಣವನ್ನು ಸಹ ದಾಖಲಿಸಲಾಗಿದೆ.