ಕಲಬುರಗಿ : ಕಲಬುರಗಿ ಜಿಲ್ಲಾಸ್ಪತ್ರೆಯಿಂದ ಹಸುಗೂಸು ಅಪಹರಣವಾದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆ ವಾರ್ಡ್ ನಂಬರ್ 115 ರಲ್ಲಿ ಕಸ್ತೂರಿ ಎಂಬುವರಿಗೆ ಹೆರಿಗೆಯಾಗಿದ್ದು ನಿನ್ನೆ ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು ಆದರೆ ಇದ್ದಕಿದ್ದಂತೆ ಮಗು ಕಾಣೆಯಾಗಿದ್ದು ಆಸ್ಪತ್ರೆಯ ನಿರ್ಲಕ್ಸ್ಯೆಯೇ ಕರಣ ಎಂದು ಪೋಷಕರು ಆಕ್ರೋಶಹೊರಹಾಕಿದ್ದಾರೆ.
ಸೈಯದ್ ಚಿಂಚೋಳಿ ಗ್ರಾಮದಿಂದ ಕಲಬುರಗಿ ಜಿಲ್ಲಾಸ್ಪತ್ರೆಗೆ ಹೆರಿಗೆಗಾಗಿ ರಾಮಕೃಷ್ಣರವರ ಪತ್ನಿ ಕಸ್ತೂರಿ ಬಂದಿದ್ದರು ಆದರೆ ಮಗುವು ಜನ್ಮ ಪಡೆದ ನಂತರ ಬೆಡ್ ಗೆ ಶಿಫ್ಟ್ ಮಾಡಿದ್ದರು ಆದರೆ ನರ್ಸ್ ವೇಶದಲ್ಲಿಇಬ್ಬರು ಮಹಿಳೆಯರು ಬಂದಿದ್ದು ಸಂಪೂರ್ಣವಾಗಿ ಮುಖ ಮುಚ್ಚಿಕೊಂಡು ಬಂದಿದ್ದ ನಕಲಿ ನರ್ಸ್‌ಗಳು ರಕ್ತ ತಪಾಸಣೆಗಾಗಿ ಮಗುವನ್ನ ಕರೆದುಕೊಂಡು ಹೋಗಿದ್ದಾರೆ.ಅದರಂತೆ ಮಗುವಿನ ಚಿಕ್ಕಮ್ಮ ಚಂದ್ರಕಲಾ ಮಗುವನ್ನ ರಕ್ತ ತಪಾಸಣೆಗೆ ಕರೆದುಕೊಂಡು ಹೋಗಿದ್ದರು ಈ ವೇಳೆ ಮಗುವನ್ನ ನಮಗೆ ಕೊಡಿ ಅಂತಾ ನಕಲಿ ನರ್ಸ್‌ಗಳು ಹೇಳಿದ್ದು ಬಳಿಕ ಮಗುವನ್ನ ಎತ್ತಿಕೊಂಡು ಎಸ್ಕೇಪ್ ಆಗಿದ್ದಾರೆ.ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.


