Friday, March 6, 2026
Flats for sale
Homeಜಿಲ್ಲೆಮಂಗಳೂರು : 3 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ : 70 ವರ್ಷದ ಕಾಮುಕನ ಬಂಧನ..!

ಮಂಗಳೂರು : 3 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ : 70 ವರ್ಷದ ಕಾಮುಕನ ಬಂಧನ..!

ಮಂಗಳೂರು : ಉಳ್ಳಾಲ ತಾಲೂಕು ಬಳೆ ಪುನಿ ಗ್ರಾಮದಲ್ಲಿ 21-11-2024 ರಂದು 3 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ಪ್ರಕಾರ ಮಗುವು ಅಡಿಕೆ ಅಂಗಡಿಯೊಂದರ ಬಳಿ ಆಟವಾಡುತ್ತಿದ್ದಾಗ ಅಂಗಡಿಯವರಿಂದ ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿದೆ ಎಂದು ತಿಳಿಯಲಾಗಿದೆ . ಆರೋಪಿಯನ್ನು ಪ್ರಸ್ತುತ ಮೂಡಣಗಾರಕಟ್ಟೆಯಲ್ಲಿ ವಾಸವಾಗಿರುವ ಅಹ್ಮದ್ ಕುಂಞಿ ಎಂಬವರ ಪುತ್ರ ಅಬ್ದುಲ್ಲಾ (70 ವರ್ಷ) ಎಂದು ಗುರುತಿಸಲಾಗಿದೆ. ಮಗುವಿನಲ್ಲಿ ಅಸ್ವಸ್ಥತೆಯನ್ನು ಗಮನಿಸಿದ ನಂತರ ದೂರುದಾರರು (ಮಗುವಿನ ತಾಯಿ) ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ.

ತಾಯಿಯ ದೂರಿನ ಮೇರೆಗೆ ಕೊಣಾಜೆ ಪಿಎಸ್ ನಲ್ಲಿ ಸಿಆರ್ ನಂ: 137/24 ಯು/ಸೆ 9, 10 ಮತ್ತು 12 ಪೋಕ್ಸೋ ಕಾಯ್ದೆ ಮತ್ತು ಕಲಂ 65 ಬಿಎನ್ ಎಸ್ ನಂತೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು , ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular