ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬರೋಬ್ಬರಿ ಐದು ಸಾವಿರ ಕೋಟಿ ಹಗರಣವಾಗಿರುವುದು ಬಹುತೇಕ ಖಚಿತವಾಗಿದ್ದು, ಈ ಬಗ್ಗೆ ಇಡಿಗೆ ದಾಖಲೆಗಳ ಸಮೇತ ವಿವರ ದೂರು ನೀಡಲಾಗುವುದು ಎಂದು ದೂರುದಾರ ಹಾಗೂ ಆರ್‌ಟಿಐ ಕರ‍್ಯಕರ್ತ ಗಂಗರಾಜು ತಿಳಿಸಿದ್ದಾರೆ.
ಈ ಕುರಿತು ಅವರು ಮಾಹಿತಿ ನೀಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ನಿವೇಶಗಳ ಹಗರಣ 30 ರಿಂದ 40 ಕೋಟಿಯಷ್ಟು. ಆದರೆ ಒಟ್ಟಾರೆಯಾಗಿ ನಡೆದಿರುವ ಹಗರಣ ಬೆಚ್ಚಿಬೀಳಿಸುವಂತಿದ್ದು ಇದು ಐದು ಸಾವಿರ ಕೋಟಿ ರೂ.ಮೀರುತ್ತದೆ. ಇದರಲ್ಲಿ ಮುಡಾದ ಈ ಹಿಂದಿನ ಅಧಿಕಾರಿಗಳು, ಸಿಬ್ಬಂದಿ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಗುರುತಿಸಿದರು.
ಶೇಕಡ ೫೦ರ ಅನುಪಾತದ ನಿವೇಶನ ಹಂಚಿಕೆ, ಖಾತೆ ಕಂದಾಯ, ಟೈಟಲ್ ಡೀಡ್ ನೀಡಿಕೆ ಸೇರಿ ಎಲ್ಲಾ ವಿಷಯದಲ್ಲಿಯೂ ಅಕ್ರಮ ನಡೆದಿವೆ. ಮುಡಾದಲ್ಲಿ ಕೆಲಸ ಮಾಡುವ ಡಿ ಗ್ರೂಪ್ ನೌಕರರೂ ಸಹ ೩೦ರಿಂದ ೪೦ ಲಕ್ಷ ರೂಪಾಯಿ ಬೆಲೆ ಬಾಳುವ ಕಾರು ಹೊಂದಿದ್ದಾರೆ. ಇದು ಹೇಗೆ ಇವರಿಗೆ ಸಾಧ್ಯವಾಯಿತು ಎಂಬುದನ್ನು ಗಮನಿಸಿದರೆ ಅನೇಕ ಅಂಶಗಳು ಬೆಳಕಿಗೆ ಬರುತ್ತವೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಿದ್ದು ಇಡಿಗೆ ಎಲ್ಲ ದಾಖಲೆ ಸಲ್ಲಿಸುವುದಾಗಿ ಹೇಳಿದರು.