Tuesday, December 3, 2024
Flats for sale
Homeಜಿಲ್ಲೆಪುತ್ತೂರು : ಮೃತಪಟ್ಟ ದಲಿತ ವ್ಯಕ್ತಿಯ ಶವವನ್ನು ರಸ್ತೆ ಬದಿ ಮಲಗಿಸಿ ಹೋದ ಪ್ರಕರಣ ,...

ಪುತ್ತೂರು : ಮೃತಪಟ್ಟ ದಲಿತ ವ್ಯಕ್ತಿಯ ಶವವನ್ನು ರಸ್ತೆ ಬದಿ ಮಲಗಿಸಿ ಹೋದ ಪ್ರಕರಣ , ಓರ್ವನ ಬಂಧನ….!

ಪುತ್ತೂರು : ಕೆರೆಮೂಲೆ ನಿವಾಸಿ ಶಿವಪ್ಪ ಎಂಬುವವರ ಪಾರ್ಥಿವ ಶರೀರವನ್ನು ಮನೆ ಮುಂದೆ ರಸ್ತೆ ಬದಿ ಮಲಗಿಸಿ ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪದ ಮೇಲೆ ಮೂವರ ವಿರುದ್ಧ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪುತ್ತೂರಿನ ಸಾಲ್ಮರದ ಕೆರೆಮೂಲೆ ಸಿಮೆಂಟ್ ಸಾರಣೆ ಕೆಲಸದ ಸಹಾಯಕರಾಗಿ ಹೋದ ಕೂಲಿ ಕಾರ್ಮಿಕರೊಬ್ಬರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಅವರ ಮನೆಯ ರಸ್ತೆ ಸಮೀಪ ಮಲಗಿಸಿ ಹೋದ ಘಟನೆಯೊಂದು ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಸಮೀಪದ ಕೆರೆಮೂಲೆಯಲ್ಲಿ ನಡೆದಿತ್ತು . ನವಂಬರ್ 16 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಕಾಮಗಾರಿಯ ಮಾಲಕರ ವಿರುದ್ಧ ಮನೆ ಮಂದಿ ಮತ್ತು ಊರವರು ಆಕ್ರೋಶ ವ್ಯಕ್ತಪಡಿಸಿದ್ದರು.ಇದೀಗ ಮೃತರ ಅಳಿಯ ಶಶಿ ಕೆರೆಮೂಲೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.

ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪೊಲೀಸರು ಹೆನ್ರಿ ಟೌರೊ, ಸ್ಟ್ಯಾನಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಸಂಜೆಯೊಳಗೆ ಶಂಕಿತರನ್ನು ಬಂಧಿಸದಿದ್ದರೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular