ಉಡುಪಿ : ನ.15ರಂದು ಸಿಎಸ್ ಟಿ ಮಂಗಳೂರು ಎಕ್ಸ್ ಪ್ರೆಸ್ ರೈಲಿನಲ್ಲಿ (ರೈಲು ನಂ. 12133, ಕೋಚ್ ನಂ. ಎಸ್ 3) ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಮುಂಬೈನಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ 63 ಲಕ್ಷ ಮೌಲ್ಯದ 900 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನವಾದ ಘಟನೆ ವರದಿಯಾಗಿದೆ.
ಮುಂಬೈನ ನಿವಾಸಿ ಅವಿನಾಶ್ ಈ ಸಂಬಂಧ ದೂರು ನೀಡಿದ್ದು ನವೆಂಬರ್ 15ರಂದು ತನ್ನ ಕುಟುಂಬದೊಂದಿಗೆ ಮುಂಬೈನಿಂದ ಸಿಎಸ್ಟಿ ಮಂಗಳೂರು ಎಕ್ಸ್ಪ್ರೆಸ್ ರೈಲಿ ನಲ್ಲಿ ಪ್ರಯಾಣಿಸಿದ್ದೇವು. ಬಟ್ಟೆ ಮತ್ತು ಚಿನ್ನಾಭರಣಗಳಿದ್ದ ನಾಲ್ಕು ಸೂಟ್ಕೇಸ್ಗಳನ್ನು ತೆಗೆದುಕೊಂಡು ಹೋಗಿದ್ದು ಅದನ್ನು ಸೀಟಿನ ಕೆಳಗೆ ಇಟ್ಟಿದ್ದೇವು.ಆದ್ರೆ ನವೆಂಬರ್ 16 ರಂದು ಇಂದ್ರಾಳಿ ರೈಲು ನಿಲ್ದಾಣದಲ್ಲಿ ಕುಟುಂಬ ಇಳಿದಿದ್ದು, ಸಂಜೆ ಮನೆಯಲ್ಲಿ ಬ್ಯಾಗ್ಗಳನ್ನು ತೆರೆದಾಗ ಎರಡು ಬ್ಯಾಗ್ಗಳಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪನ್ವೇಲ್ ಮತ್ತು ಕಂಕಾವಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ.ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.