Thursday, November 21, 2024
Flats for sale
Homeರಾಜ್ಯಚಿಕ್ಕಬಳ್ಳಾಪುರ : ಬೆಳ್ಳೂಟಿ ಗ್ರಾಮದ ಪುರಾತನ ಗುಟ್ಟಾಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ..!

ಚಿಕ್ಕಬಳ್ಳಾಪುರ : ಬೆಳ್ಳೂಟಿ ಗ್ರಾಮದ ಪುರಾತನ ಗುಟ್ಟಾಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ..!

ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೆಳ್ಳೂಟಿ ಗ್ರಾಮದ ಪುರಾತನ ಗುಟ್ಟಾಂಜನೇಯಸ್ವಾಮಿ ದೇವಾಲಯವನ್ನೇ ಖಬರಸ್ತಾನ್ ವಕ್ಪ್ ಆಸ್ತಿಯಾಗಿ ನಮೂದು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಂದಹಾಗೆ 2018-19 ರಲ್ಲೇ ಸರ್ಕಾರದ ಆದೇಶದ ಪ್ರಕಾರ ಬೆಳ್ಳೂಟಿ ಗ್ರಾಮದ ಸರ್ವೆ ನಂಬರ್ ೦6ರ 1 ಎಕೆರೆ 30 ಗುಂಟೆ ಜಾಗವನ್ನ ವಕ್ಪ್ ಆಸ್ತಿಯಾಗಿ ನಮೂದು ಮಾಡಲಾಗಿದೆ. 1 ಎಕರೆ 30 ಗುಂಟೆಯಲ್ಲಿ ಗುಟ್ಟಾಂಜನಯೇಸ್ವಾಮಿ ದೇವಾಲಯ ಸೇರಿದಂತೆ ಪಕ್ಕದಲ್ಲೇ ಮಸೀದಿ ದರ್ಗಾವೂ ಇದೆ. ಆದ್ರೆ ಪೂರಾ 1 ಎಕೆರೆ 30 ಗುಂಟೆಯೂ ಖಬರಸ್ತಾನ್ ವಕ್ಪ್ ಆಸ್ತಿಯಾಗಿ ಬದಲಾಗಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಅವರು ವ್ಯಾಸಂಗ ಮಾಡಿದ್ದ ಸರ್ಕಾರಿ ಶಾಲೆಯನ್ನೂ ವಕ್ಫ್‌ ಹೆಸರಿಗೆ ಪರಭಾರೆ ಮಾಡಿರುವ ಪ್ರಸಂಗ ಬೆಳಕಿಗೆ ಬಂದಿತ್ತು. ಚಿಕ್ಕಬಳ್ಳಾಪುರ ತಾಲೂಕಿನ ಕಂದವಾರ ಸರ್ಕಾರಿ ಮಾದರಿ‌ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್‌ ಸ್ವತ್ತು ಎಂದು ಬದಲಾವಣೆ ಮಾಡಲಾಗಿದೆ.

2015-16 ರಲ್ಲಿ ಪಹಣಿಯಲ್ಲಿ ಸ್ಕೂಲು ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಗ್ರಾಮಸ್ಥರು ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆ ಎತ್ತಿದೆ. ಗ್ರಾಮಸ್ಥರು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಮೊರೆ ಹೋಗಿದ್ದಾರೆ. ಈ ಬೆನ್ನಲ್ಲೇ ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular