Tuesday, December 3, 2024
Flats for sale
HomeUncategorizedಮಂಗಳೂರು : ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಿಯುಗದ ಕರ್ಣ ಸದಾಶಿವ ಶೆಟ್ಟಿಯವರಿಗೆ ತುಳುನಾಡಿನಲ್ಲಿ ಭರ್ಜರಿ...

ಮಂಗಳೂರು : ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲಿಯುಗದ ಕರ್ಣ ಸದಾಶಿವ ಶೆಟ್ಟಿಯವರಿಗೆ ತುಳುನಾಡಿನಲ್ಲಿ ಭರ್ಜರಿ ಸ್ವಾಗತ..!

ಮಂಗಳೂರು : ಕರ್ನಾಟಕ ಸರಕಾರದ ರಾಜ್ಯೋತ್ಸವದ ಹಿನ್ನೆಲೆ ಕನ್ನಡ ಸಂಸ್ಕೃತಿ ಇಲಾಖೆಯ ಸುವರ್ಣ ಸಂಭ್ರಮ ಸಮಾರಂಭದ ಅಂಗವಾಗಿ ಸಾಧಕರನ್ನು ಗುರುತಿಸಿ ಗೌರವಿಸುವ ವಿಶೇಷ ಪ್ರಶಸ್ತಿಗೆ ಗಡಿನಾಡಿನ ಸದಾಶಿವ ಶೆಟ್ಟಿ ಆಯ್ಕೆಯಾಗಿದ್ದರು ಈ ಹಿನ್ನೆಲೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪ್ರಶಸ್ತಿಗಳ ಸರಮಾಲೆಯನ್ನು ಮುಡಿಗೇರಿಸಿಕೊಂಡ ನಂತರ ಪ್ರಥಮಬಾರಿಗೆ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರವರು ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಅವರನ್ನು ಬೀಳ್ಕೊಡಲು ಹಲವು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸ್ವಾಗತಿಸಿದರು. ಬಳಿಕ ವಿವಿಧ ಭಾಗಗಳಲ್ಲಿ ಕೊಡುಗೈ ದಾನಿ,ಉದ್ಯಮಿ ಸಮಾಜ ಸೇವಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿಯವರನ್ನು ಹಲವು ಸಂಘಟನೆಗಳು ಧಾರ್ಮಿಕ ಮುಖಂಡರು ಸಾರ್ವಜನಿಕವಾಗಿ ಸನ್ಮಾನಿಸಿ ಅಭಿನಂದಿಸಿದರು.

ಕರ್ನಾಟಕ ರಾಜ್ಯೋತ್ಸವ ಸುವರ್ಣ ಮಹೋತ್ಸವ ಪುರಸ್ಕೃತರಾದ ಬಡವರ ಬಂಧು ನಮ್ಮೂರ ದೊರೆ ಶ್ರೀಯುತ ಕನ್ಯಾನ ಸದಾಶಿವ ಕೆ ಶೆಟ್ಟಿ ಯವರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಭಿಮತ TV ಮತ್ತು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ಕೇಂದ್ರೀಯ ಸಮಿತಿಯ ಪರವಾಗಿ ಅದ್ದೂರಿ ಸ್ವಾಗತವನ್ನು ಕೋರಲಾಯಿತು
ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದ ಕೋಶಾಧಿಕಾರಿ ಕಾರ್ತಿಕ್ ಶೆಟ್ಟಿ ಮಜಿಬೈಲ್, ಪದಾಧಿಕಾರಿಗಳಾದ ದೇವಿ ಪ್ರಸಾದ್ ಶೆಟ್ಟಿ ಬಾಯರ್, ಜಿತೇಂದ್ರ ಶೆಟ್ಟಿ ತಲಪಾಡಿ, ಮಹಮದ್ ಹಾಜಿ ಕಂಚಿಲ ಶುಭನುಡಿಗಳನ್ನು ಕೋರಿದರು ಅಭಿಮತ tv ಮಾಲಕರಾದ ಮಮತಾ ಶೆಟ್ಟಿ ಹಾಗೂ ಸೇವಾಬಳಗ ದ ಪದಾಧಿಕಾರಿಗಳು ಉಪಸ್ಥಿತರಿದ್ದರು ಸದಾಶಿವ ಶೆಟ್ಟಿ ಅಭಿಮಾನಿ ಸೇವಾಬಳಗ ದ ಉಪಾಧ್ಯಕ್ಷರಾದ ಶ್ರೀ ನಾರಾಯಣ್ ನಾಯಕ್ ನಡುಹಿತ್ಲು ಸ್ವಾಗತಿಸಿ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ ದ ಕಾರ್ಯದರ್ಶಿ ಶ್ರೀ ಜಯರಾಜ್ ಶೆಟ್ಟಿ ಚಾರ್ಲ ವಂದಿಸಿದರು

ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ದಲ್ಲಿ ಬರುವ 2025 ನೇ ಮಾರ್ಚ್ ತಿಂಗಳ ಕೊನೆಗೆ ಜರಗಲಿರುವ ಬ್ರಹ್ಮ ಕಲಶೋತ್ಸವ ದ ಯಶಸ್ಸಿಗಾಗಿ ಭಕ್ತವೃಂದ ಕಾಯಾ ವಾಚಾ ಮನಸಾ ಭಾಗವಹಿಸಬೇಕೆಂಬ ಆಶಯಗಳೊಂದಿಗೆ ಮಂಜೇಶ್ವರ ತಾಲೂಕು ಹಾಗೂ ಆಯಾ ಪ್ರಾದೇಶಿಕ ಸಮಿತಿಗಳ ಸಮಾಲೋಚನಾ ಸಭೆಯನ್ನು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ, ಕುಳೂರು ಕನ್ಯಾನ ಶ್ರೀ ಸದಾಶಿವ ಶೆಟ್ಟಿ ಅವರ ಘನ ಅಧ್ಯಕ್ಷತೆಯಲ್ಲಿ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ನಲ್ಲಿ ಇಂದು ಅಭಿನಂದಿಸಿದರು. ಹಾಗೂ ಇನ್ನಿತರ ಸ್ಥಳಗಳಲ್ಲಿ ಅವರನ್ನು ಅಭಿನಂದಿಸಿ ಮನಃಪೂರ್ವಕವಾಗಿ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular