ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕಾರ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು ಮದ್ಯ ಮಾರಾಟಗಾರರ ಸಂಘ ಭ್ರಷ್ಟಾಚಾರ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಬಕಾರಿ ಇಲಾಖೆಯಲ್ಲಿ ಅವ್ಯಾಹತ ಭ್ರಷ್ಟಾಚಾರ ಮತ್ತು ಅಧಿಕಾರಿಗಳು ಮನಬಂದಂತೆ ಲೈಸನ್ಸ್ ಹಂಚುವುದನ್ನು ವಿರೋಧಿಸಿ ರಾಜ್ಯ ಮದ್ಯ ಮಾರಾಟಗಾರರ ಸಂಘವು ನವೆಂಬರ್ 20 ರಂದು ಮದ್ಯ ಮಾರಾಟವನ್ನು ಬಂದ್ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಗುರುಸ್ವಾಮಿ ತಿಳಿಸಿದ್ದಾರೆ.
ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಚಿವ ನಾಗೇಶ್ ಅಬಕಾರಿ ಸಚಿವರಾಗಿದ್ದಾಗಲೂ ಲಂಚ ಇತ್ತು. ಈಗ ಮಿತಿ ಮೀರಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದ್ದಾರೆ.ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರರವರನ್ನು ಬದಲಿಸಬೇಕೆಂದು ಮದ್ಯ ಮಾರಾಟಗಾರರ ಸಂಘ ಸರಕಾರವನ್ನು ಒತ್ತಾಯಿಸಿದೆ.ಒಟ್ಟಿನಲ್ಲಿ ರಾಜ್ಯದಲ್ಲಿರುವ ಸಿದ್ದರಾಮಯ್ಯ ಸರಕಾರ ಎಲ್ಲಾ ಹಗರಣಗಳನ್ನು ಮೈಮೇಲೆ ಎತ್ತಿಕೊಂಡು ಅಧಿಕಾರ ಚಲಾಯಿಸುತ್ತಿರುವುದಂತೂ ನಾಡಿನ ಜನತೆಗೆ ತಿಳಿದಂತಾಗಿದೆ.