ಮೈಸೂರು : ಜಿಲ್ಲೆಯ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚರ್ಚ್ ಮೇಲೆ ಮಂಗಳವಾರ ಸಂಜೆ ದಾಳಿ ನಡೆದಿದೆ.ಚರ್ಚ್ ಆವರಣದಲ್ಲಿರುವ ತೊಟ್ಟಿಲೊಂದರಲ್ಲಿ ಇಟ್ಟಿದ್ದ ಶಿಶು ಏಸುವಿನ ಪ್ರತಿಮೆಯನ್ನುತೊಟ್ಟಿಲನ್ನೂ ಎಸೆದು ಹಾಕಿ ದುಷ್ಕರ್ಮಿಗಳು ಧ್ವಂಸ ಮಾಡಿದ್ದಾರೆ ಎಂದು ಜಾನ್ ಪಾಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚರ್ಚ್‌ನ ಕೆಲಸಗಾರ ರಾಜಣ್ಣ ಸಂಜೆ 6 ಗಂಟೆ ಸುಮಾರಿಗೆ ಲೈಟ್‌ಗಳನ್ನು ಆನ್ ಮಾಡಲು ಚರ್ಚ್‌ಗೆ ಪ್ರವೇಶಿಸಿದಾಗ ಕೃತ್ಯ ಪತ್ತೆಯಾಗಿದೆ ಎಂದು ಜಾನ್ ಪಾಲ್ ಹೇಳಿದ್ದಾರೆ. ರಾಜಣ್ಣ ಚರ್ಚ್ ಪ್ರವೇಶಿಸಿದಾಗ ಚರ್ಚ್‌ನ ಹಿಂದಿನ ಬಾಗಿಲು ತೆರೆದಿತ್ತು. ಕಿಡಿಗೇಡಿಗಳು ಮತ್ತೊಂದನ್ನು ತೆರೆಯಲು ಯತ್ನಿಸಿದ್ದರು.
ಅವರು ಯಾವುದೋ ಕೆಲಸದ ಮೇಲೆ ಮೈಸೂರಿಗೆ ಬಂದಿದ್ದಾಗ ಈ ಘಟನೆ ಸಂಭವಿಸಿದ್ದು, ಚರ್ಚ್‌ನ ಮಹಿಳಾ ಕೆಲಸಗಾರ್ತಿ ಕೂಡ ಮಂಗಳವಾರ ರಜೆಯಲ್ಲಿದ್ದರು.
ಮೈಸೂರು ಜಿಲ್ಲಾ ಎಎಸ್ಪಿ ನಂದಿನಿ ಚರ್ಚ್‌ಗೆ ಭೇಟಿ ತನಿಖೆ ನಡೆಸುತ್ತಿದ್ದಾರೆ.