Friday, March 13, 2026
Flats for sale
Homeರಾಜ್ಯಬೆಂಗಳೂರು : ಹೋಂ ಸ್ಟೇಯಲ್ಲಿ ಯುವಕ ಯುವತಿಯರ ಮೇಲೆ ದಾಳಿ, ಓರ್ವ ಯುವಕ ಸಾವು,ಮೂವರ ಬಂಧನ..!

ಬೆಂಗಳೂರು : ಹೋಂ ಸ್ಟೇಯಲ್ಲಿ ಯುವಕ ಯುವತಿಯರ ಮೇಲೆ ದಾಳಿ, ಓರ್ವ ಯುವಕ ಸಾವು,ಮೂವರ ಬಂಧನ..!

ಬೆಂಗಳೂರು : ಇನ್ನೇನ್ನು ಕಾಲೇಜು ಮುಗಿದು ಮತ್ತೆ ಅವರರವರ ಜೀವನ ನೀರೂಪಿಸುವುದರಲ್ಲಿ ಬ್ಯುಸಿ ತೊಡಗಿಕೊಂಡಿರುವ ಮೊದಲು ಎಲ್ಲಾ ಸಹಪಾಠಿಗಳು ಒಟ್ಟಾಗಿ ಪ್ರವಾಸಕ್ಕೆ ರಾಮನಗರದ ಬಳಿ ಇರುವ ಹೋಂ ಸ್ಟೇ ಗೆ ಬಂದಿದ್ದರು ಸ್ವಿಮ್ಮಿಂಗ್​ ಪೂಲ್​ನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತಿದ್ದ ಸಂದರ್ಭದಲ್ಲಿ ಮೂವರು ಧೀಡೀರನೇ ನುಗ್ಗಿ ವಿಡಿಯೋ ಮಾಡುತ್ತಾ ಒಬ್ಬ ವಿದ್ಯಾರ್ಥಿಯ ಪ್ರಾಣವನ್ನು ತೆಗೆದ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪುನೀತ್ (21) ಮೃತ ವಿದ್ಯಾರ್ಥಿ. ಬೆಂಗಳೂರು ಮೂಲದ 7 ವಿದ್ಯಾರ್ಥಿಗಳು ರಜಾ ದಿನ ಕಳೆಯಲು ರಾಮನಗರ ತಾಲೂಕಿನ ಚಿಕ್ಕೇನಹಳ್ಳಿ ಫಾರ್ಮ್‌ಹೌಸ್‌ಗೆ ಹೋಗಿದ್ದರು. ಫಾರ್ಮ್‌ಹೌಸ್‌ನಲ್ಲಿ ಸ್ವಿಮ್ಮಿಂಗ್ ಮಾಡುತ್ತಿದ್ದ ವಿದ್ಯಾರ್ಥಿನಿಯರ ಪೋಟೊ ಕ್ಲಿಕ್ಕಿಸಲು ಸ್ಥಳೀಯ ಯುವಕರು ಬಂದಿದ್ದರು. ಫೋಟೋ ತೆಗೆಯಲು ಮುಂದಾದ ಯುವಕರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ವಿದ್ಯಾರ್ಥಿಗಳ ಮೇಲೆ ಯುವಕರು ಕೈ ಮಾಡಿದ್ದಾರೆ. ಪುನೀತ್ ಎಂಬ ವಿದ್ಯಾರ್ಥಿಯ ತಲೆಗೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರಿಗೆ ಯುವಕರು ಮಾಹಿತಿ ನೀಡಿದ್ದಾರೆ. ಕಳೆದ ಅ.26 ರಂದು ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗಳೂರಿನ ಬನ್ನೇರುಘಟ್ಟ ಮೂಲದ ಪುನೀತ್ ಚಾರ್ಟಡ್ ಅಕೌಂಟ್ ಆಗಿ ಇಂಟರ್ನ್ಶಿಪ್ ಮಾಡುತ್ತಿದ್ದ. ತಂದೆ ಆಟೋ ಚಾಲಕ, ಆರ್​ಎಸ್​ಎಸ್​ನಲ್ಲಿ ವಿದ್ಯಾರ್ಥಿ ದೆಸೆಯಿಂದ‌ ಕೆಲಸ ಮಾಡುತ್ತಿದ್ದ ಪುನೀತ್, ಲಿಖಿತ್ ಪರಿಚಯವಿರುವ ಚಿಕ್ಕೇನಹಳ್ಳಿಯ ಪಾರಂ‌ ಹೌಸ್ ಕಮ್ ಹೋಮ್ ಸ್ಟೇ ಗೆ ಅ.26ರ ಸಂಜೆ ಹೋಗಿದ್ದಾರೆ. ಸಂಜೆ ವೇಳೆ ಶುರುವಾದ ಗಲಾಟೆಯಲ್ಲಿ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಂದು ಸ್ವಿಮ್ಮಿಂಗ್​ ಪೂಲ್​ನಲ್ಲಿ ಈಜಾಡುತ್ತಿದ್ದ ಇಬ್ಬರ ಯುವತಿಯ ವಿಡಿಯೋ ಮಾಡಿಕೊಳ್ಳಲು ಹೋದಾಗ ಲಿಖಿತ್ ಅದನ್ನು ತಡೆದಿದ್ದಾನೆ.

ಈ ಘಟನೆಯನ್ನು ಸೈಡಲ್ಲಿ ನಿಂತು ಚಿತ್ರಿಸಿಕೊಳ್ಳುತ್ತಿದ್ದ ಪುನೀತ್ ಮೇಲೆ ದೊಣ್ಣೆಯಿಂದ ದಾಳಿ ಮಾಡಿದ ಚಂದು ಮತ್ತು ಇಬ್ಬರು ಆರೋಪಿಗಳು ಯುವತಿಯರ ಮುಂದೆ ನೈತಿಕ ಪೊಲೀಸ್ ಗಿರಿಯ ಪೋಸ್ ಕೊಟ್ಟಿದ್ದಾರೆ. ಕೈಯಲ್ಲಿ ಸಿಗರೇಟ್ ಹಿಡಿದು ಕೆಲ ಕಾಲ ಮಾತಿಗೆ ಮಾತು ಬೆಳೆದು ಕೊಲೆ ಆರೋಪಿ ಚಂದು, ನೀನು ಹೆಣ್ಣು ಮಕ್ಕಳ ಮೇಲೆ ಕೈಮಾಡ್ತಾ ಇದ್ದೀಯಾ, ನಾವು ಮಹಿಳಾ ರಕ್ಷಣಾ ಪಡೆಯವರು ಅಂತ ಕೂಗಾಡಿದ್ದಾನೆ. ಇದನ್ನು ಪ್ರಶ್ನಿಸಿದ ಯುವಕ ನಾವು ಸ್ನೇಹಿತರು, ನಮ್ಮ ಇಚ್ಛೆಯಂತೆ ನಾವು ಬಂದಿದ್ದೇವೆ ಬೇಕಾದರೆ ಯುವತಿಯರಿಗೆ ಕೇಳಿ ಅಂದ್ರೂ ಕೂಡ ಹಲ್ಲೆ ಮಾಡಿದ ಚಂದು ಒಬ್ಬ ಅಮಾಯಕ ಜೀವ ಬಲಿ ಪಡೆದಿದ್ದಾನೆ.

ಹಲ್ಲೆಗೊಳಗಾದ ಪುನೀತ್ ಎಂಬಾತನನ್ನು ಕೆಂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ನಿಷ್ಕ್ರಿಯಗೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಅ.29ರಂದು ಪುನೀತ್ ಸಾವನ್ನಪ್ಪಿದ್ದಾನೆ. ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಯುವಕನ ಅಂಗಾಂಗ ದಾನ ಮಾಡಲಾಗಿದೆ. ಪೋಲೀಸರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಹೊನ್ನಾಪುರ ಗ್ರಾಮದ ಚಂದ್ರು, ನಾಗೇಶ್, ಮುರಳಿ ಬಂಧಿತ ಆರೋಪಿಗಳು.

RELATED ARTICLES

LEAVE A REPLY

Please enter your comment!
Please enter your name here

Most Popular