ಮಂಗಳೂರು : ಈ ರಾಜ್ಯೋತ್ಸವ ಪ್ರಶಸ್ತಿ ಅಂದರೆ ಈಗೇನೆ ಹಣ ಹಾಗೂ ರಾಜೇಕೀಯ ಪ್ರಭಾವದಿಂದ ಬೇಗನೆ ಸಿಗುತ್ತೆ ಈ ಬಾರಿಯೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಪರಾಧ ಹಿನ್ನೆಲೆ ಇರುವವವರು ಪ್ರಶಸ್ತಿ ಪಡೆದ ಘಟನೆ ನಡೆದಿದೆ ಅಂತಹದರಲ್ಲಿ ಅಸಂಖ್ಯಾತರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಬಾಬು ಪಿಲಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಇಲಾಖೆ ಅಧಿಕಾರಿ ನೀಲಮ್ಮ ಎನ್ನುವರು ಫೋನ್ ಮಾಡಿ ತಿಳಿಸಿದ್ದಾರೆ.ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ಕರೆಯಿಸಿಕೊಂಡಿದ್ದು ಕೊಠಡಿ ಕೂಡ ಕೊಟ್ಟು ಇಂದು ಪ್ರಶಸ್ತಿ ಸ್ವೀಕರಿಸಲು ಮಾಹಿತಿ ನೀಡಿದ್ದರು. ಆದರೆ ಕುಮಾರ ಕೃಪಾ ಬಳಿ ಬಸ್ ಹತ್ತುವ ವೇಳೆ ನೀವು ಅವರಲ್ಲ ಅವರು ನೀವಲ್ಲ ಎಂಬಂತೆ ನಿಮಗೆ ಪ್ರಶಸ್ತಿ ಇಲ್ಲ. ಮತ್ತೊಬ್ಬರು ಬಾಬು ಕಿಲಾರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.ಇನ್ನೇನು ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಅಧಿಕಾರಿಗಳು ಹೇಳಿ ಅವಮಾನ ಮಾಡಿದ್ದಾರೆ.
ಅತ್ತ ಜಿಲ್ಲಾ ಪ್ರಶಸ್ತಿಯೂ ಇಲ್ಲದೇ ರಾಜ್ಯ ಪ್ರಶಸ್ತಿಯೂ ಇಲ್ಲದೇ ಬೆಂಗಳೂರಿನಲ್ಲಿ ಬಾಬು ಪಿಲಾರ್ ಏಕಾಂಗಿಯಾದ್ದಾರೆ. ಸ್ಪೀಕರ್ ಯು.ಟಿ.ಖಾದರ್ ಕ್ಷೇತ್ರ ಉಳ್ಳಾಲದ ಸಮಾಜ ಸೇವಕರಾಗಿರೋ ಬಾಬು ಪಿಲಾರ್, ಅಸಂಖ್ಯಾತ ಪಾರ್ಥೀವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ರಾಜ್ಯ ಸರಕಾರದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸಂಖ್ಯಾತರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ ಬಾಬು ಪಿಲಾರ್ ರವರಿಗೆ ಅವಮಾನವಾಗಿದ್ದು ಸಮಾಜ ಸೇವಕ ಬಾಬು ಪಿಲಾರ್ ಕಂಗಾಲಾಗಿದ್ದಾರೆ.ಕಣ್ತಪ್ಪಿನಿಂದ ತಪ್ಪಾಗಿದೆ ಕ್ಷಮಿಸಿ. ಬಾಬು ಪಿಲಾರ್ ಬದಲು ಬಾಬು ಕಿಲಾರ್ ಆಗಬೇಕಿತ್ತು ಎಂದು ಸಮಜಾಯಿಷಿ ನೀಡಿ ಕಳುಹಿಸಿದ್ದಾರೆ. ಈ ಸರಕಾರಿ ಅಧಿಕಾರಿಗಳು ಯಾವ ರೀತಿಯಲ್ಲಿ ತಮ್ಮ ಕೆಲಸಕಾರ್ಯವನ್ನು ಮಾಡುತ್ತಾರೆಂಬುದನ್ನು ಈ ಒಂದು ಘಟನೆಯಲ್ಲಿ ತಿಳಿಯಬಹುದಾಗಿದೆ.


