Friday, November 22, 2024
Flats for sale
Homeಜಿಲ್ಲೆಮಂಗಳೂರು : ಹಿರಿಯ ಪತ್ರಕರ್ತ ರಾಜೇಶ್ ರಾವ್ , ಸುಖಪಾಲ್ ಪೊಳಲಿ,ಪುಷ್ಪರಾಜ್ ಬಿ.ಎನ್ ರವರಿಗೆ ದ.ಕ....

ಮಂಗಳೂರು : ಹಿರಿಯ ಪತ್ರಕರ್ತ ರಾಜೇಶ್ ರಾವ್ , ಸುಖಪಾಲ್ ಪೊಳಲಿ,ಪುಷ್ಪರಾಜ್ ಬಿ.ಎನ್ ರವರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ..!

ಮಂಗಳೂರು : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಮಾಜಿ ಟಿವಿ9 ವರದಿಗಾರ ನಮ್ಮ ಕುಡ್ಲ ವಾಹಿನಿಯ ನ್ಯೂಸ್ ಹೆಡ್ ರಾಜೇಶ್ ರಾವ್ , ವಾರ್ತಾಭಾರತಿʼಯ ಪುಷ್ಪರಾಜ್, ‘ಪಬ್ಲಿಕ್‌ ಟಿವಿ’ಯ ಮಂಗಳೂರಿನ ಹಿರಿಯ ವರದಿಗಾರರಾದ ಸುಖ್‌ಪಾಲ್ ಪೊಳಲಿ ಆಯ್ಕೆಯಾಗಿದ್ದಾರೆ. ನ.1 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಮಂಗಳೂರಿನಲ್ಲಿ ಟಿವಿ9 ವರದಿಗಾರನಾಗಿ ಸೇವೆ ಸಲ್ಲಿಸಿ ಪ್ರಸ್ತುತ ಮಂಗಳೂರಿನ ನಮ್ಮ ಕುಡ್ಲ ವಾಹಿನಿಯಲ್ಲಿ ನ್ಯೂಸ್ ಹೆಡ್ ಆಗಿರುವ ರಾಜೇಶ್ ರಾವ್ ಪುತ್ತೂರು ಇವರಿಗೆ 2024 ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಪುತ್ತೂರಿನಲ್ಲಿ ಕೇಬಲ್ ಟಿವಿ ಮೂಲಕ ಉದ್ಯಮಕ್ಕೆ ಕಾಲಿರಿಸಿ, 1998 ರಲ್ಲಿ ಕೇಬಲ್ ಟಿವಿಯಲ್ಲಿ ನ್ಯೂಸ್ ಚಾನೆಲ್ ಮೂಲಕ ಮಾದ್ಯಮಕ್ಕೆ ಪದಾರ್ಪಣೆ. 2006 ರಲ್ಲಿ ರಾಜ್ಯದ ಪ್ರತಿಷ್ಠಿತ ಚಾನೆಲ್ ಟಿವಿ9 ಆರಂಭದ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರನಾಗಿ ಸ್ಯಾಟಲೈಟ್ ಚಾನೆಲ್ ನಲ್ಲಿ ಕರ್ತವ್ಯ. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರ ಪರವಾಗಿ ತಮ್ಮ ಮಾದ್ಯಮದ ಮೂಲಕ ಅಭಿಯಾನ ನಡೆಸಿ ಶಾಶ್ವತ ಅಂಗ ವೈಕಲ್ಯತೆಗೆ ಒಳಗಾದ ಜನರಿಗಾಗಿ ಕೇರ್ ಟೇಕ್ ಸೆಂಟರ್ ನಿರ್ಮಾಣಕ್ಕೆ ಶ್ರಮ. ಇದರ ಜೊತೆಗೆ ಅನೇಕ ಸಮಾಜಿಕ ಕಳಕಳಿಯ ವರದಿಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದ್ದರು. ಪುತ್ತೂರು ಕೇಬಲ್ ಟಿವಿ ಮೂಲಕ ಆರಂಭವಾದ ಇವರ ಮಾದ್ಯಮ ಪಯಣ ರಾಜ್ಯದ ಪ್ರತಿಷ್ಠಿತ ಚಾನೆಲ್ ಟಿವಿ9 ನಲ್ಲಿ ಇನ್ ಪುಟ್ ಹೆಡ್ ಆಗುವಲ್ಲಿ ತನಕ ಮುಂದುವರೆದಿತ್ತು. ವಿಶೇಷ ಅಂದ್ರೆ ಅಂದು ಜನವಾಹಿನಿ ಪತ್ರಿಕೆಯ ಪುತ್ತೂರು ವರದಿಗಾರ ಪುಷ್ಪರಾಜ್ ಅವರ ಜೊತೆಯಲ್ಲೇ ಕೆಲಸ ಮಾಡಿದ್ದು, ಇಂದು ಅವರ ಜೊತೆಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನೀಡುವ ಜಿಲ್ಲಾ ಮಟ್ಟದ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಪಬ್ಲಿಕ್‌ ಟಿವಿ’ಯ ಮಂಗಳೂರಿನ ಹಿರಿಯ ವರದಿಗಾರರಾದ ಸುಖ್‌ಪಾಲ್ ಪೊಳಲಿ ಭಾಜನರಾಗಿದ್ದಾರೆ.ಇವರು ಕೂಡ tv9 ಹಾಗೂ ಇನ್ನಿತರ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

ಕಳೆದ ಹಲವು ವರುಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನವಾಹಿನಿ ಹಾಗೂ ಇನ್ನಿತರ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ ವಾರ್ತಾಭಾರತಿಯ ಮಂಗಳೂರು ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್.ರವರಿಗೂ ದ.ಕ. ಜಿಲ್ಲಾ ಪ್ರಶಸ್ತಿ ಮಟ್ಟದ ಪ್ರಕಟವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular