ಮೈಸೂರು : ಮುಡಾದಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಮಧ್ಯವರ್ತಿ ಮೂಲಕ ಸೆಟಲ್ಮೆಂಟ್ ಡೀಡ್ ಮೂಲಕ ಕೋಟ್ಯಾಂತರ ರೂ ಅಕ್ರಮ ನಡೆದಿದ್ದು ಸೆಟಲ್ಮೆಂಟ್ ಡೀಡ್ ಮಾಡಿಕೊಂಡು ಶಿವಣ್ಣ ಎಂಬವರಿಗೆ ವಂಚಿಸಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
30 ಲಕ್ಷ ರೂ ಹಣ ಎಣಿಸುವ ವಿಡಿಯೋವನ್ನು ಗಂಗರಾಜು ಬಿಡುಗಡೆ ಮಾಡಿದ್ದು ಕಾರ್ತಿಕ ಬಡಾವಣೆಯ ಮಂಜುನಾಥ್ ಎಂಬಾತ ಕೋಟ್ಯಾಂತರ ರೂ ಡೀಲ್ ಮಾಡಿದ್ದಾನೆ ಸೆಟಲ್ಮೆಂಟ್ ಡೀಡ್ ಹೆಸರಿನಲ್ಲಿ ಸಚಿವ ಮಹದೇವಪ್ಪ ಸಹೋದರ ಪುತ್ರ ನವೀನ್ ಬೋಸ್ ಗೂ ಸೈಟ್ ನೀಡಿದ್ದಾನೆ ಲಕ್ಷಾಂತರ ರೂ ಹಣದ ವ್ಯವಹಾರ ನಡೆಸಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದು ಆರೋಪಿಸಿದ್ದಾರೆ.
ಇಡಿ ಅಧಿಕಾರಿಗಳಿಗೆ ಆ ವಿಡಿಯೋ ಕ್ಲಿಪ್ಪಿಂಗ್ ಕೂಡ ನೀಡ್ತೀನಿ ಎಂದಿದ್ದು ಎರಡು ಲಕ್ಷಕ್ಕಿಂತ ಹೆಚ್ಚಿನ ನಗದು ರೂಪದ ಹಣ ಬಳಸುವಂತಿಲ್ಲ ಆದರೆ ಮೂವತ್ತು ಲಕ್ಷ ರೂ ಹಣ ಎಣಿಸುವ ವಿಡಿಯೋ ಬಿಡುಗಡೆಮಾಡಿದ್ದು ಲೋಕಾಯುಕ್ತ ಅಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇಲ್ಲದ ಹಿನ್ನೆಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಗಂಗರಾಜು ಹೇಳಿಕೆನೀಡಿದ್ದಾರೆ.
https://youtube.com/watch?v=EEQ11ngyli4%3Fsi%3DEvp9IXVG9WsIl08r


