Thursday, March 12, 2026
Flats for sale
Homeವಿದೇಶಟೆಕ್ಸಾಸ್‌ : ಭೀಕರ ರಸ್ತೆ ಅಪಘಾತ : ಆಂಧ್ರಪ್ರದೇಶದ ಮೂವರು ಸೇರಿದಂತೆ ಐವರು ಭಾರತೀಯರು ಸಾವು...

ಟೆಕ್ಸಾಸ್‌ : ಭೀಕರ ರಸ್ತೆ ಅಪಘಾತ : ಆಂಧ್ರಪ್ರದೇಶದ ಮೂವರು ಸೇರಿದಂತೆ ಐವರು ಭಾರತೀಯರು ಸಾವು ..!

ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ನ ರಾಂಡೋಲ್ಫ್ ಬಳಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಮೂವರು ಸೇರಿದಂತೆ ಐವರು ಭಾರತೀಯರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಆರನೇ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾನೆ. ಟೆಕ್ಸಾಸ್ ಪಬ್ಲಿಕ್ ಸೇಫ್ಟಿ ಅಧಿಕಾರಿಗಳ ಪ್ರಕಾರ, ದಕ್ಷಿಣ ಬನ್‌ಹ್ಯಾಮ್‌ನಿಂದ ದಕ್ಷಿಣಕ್ಕೆ 10 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ.

ಮೃತ ಐವರಲ್ಲಿ ಮೂವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು. ಅವರನ್ನು ಗುಡೂರು ಪಟ್ಟಣದ ತಿರುಮುರು ಗೋಪಿ, ಶ್ರೀಕಾಳಹಸ್ತಿಯ ರಜಿನಿ ಶಿವ ಮತ್ತು ಹರಿ ಎಂದು ಗುರುತಿಸಲಾಗಿದೆ. ಹರಿ ಅವರ ಪತಿ ಸಾಯಿ ಚೆನ್ನು ಅವರಿಗೆ ತೀವ್ರ ಗಾಯಗಳಾಗಿದ್ದು, ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದೆ.

ಆಂಧ್ರಪ್ರದೇಶದ ಶಾಸಕ ಮತ್ತು ತೆಲುಗು ದೇಶಂ ಪಕ್ಷದ ಸದಸ್ಯ ಕೊಂಡಪಲ್ಲಿ ಶ್ರೀನಿವಾಸ್ ಅವರು ಅಹಿತಕರ ಘಟನೆಯ ಬಗ್ಗೆ ಮಾಹಿತಿ ನೀಡಿದರು.ಅಮೆರಿಕದಲ್ಲಿ ನೆಲೆಸಿರುವ ತೆಲುಗರು ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ದೇಶದ ತೆಲುಗು ಸಂಘಟನೆಗಳು ದುರಂತ ಜೀವಹಾನಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular