Tuesday, December 3, 2024
Flats for sale
Homeಸಿನಿಮಾಬೆಂಗಳೂರು ; ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟು ಬಿಗ್‌ಬಾಸ್‌ಗೆ ವಿದಾಯ ಘೋಷಿಸಿದ ಕಿಚ್ಚ ಸುದೀಪ್!

ಬೆಂಗಳೂರು ; ಅಭಿಮಾನಿಗಳಿಗೆ ಬಿಗ್ ಶಾಕ್ ಕೊಟ್ಟು ಬಿಗ್‌ಬಾಸ್‌ಗೆ ವಿದಾಯ ಘೋಷಿಸಿದ ಕಿಚ್ಚ ಸುದೀಪ್!

ಬೆಂಗಳೂರು ; ಖ್ಯಾತ ನಟ ಕಿಚ್ಚ ಸುದೀಪ್​ ಅವರು ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್​ ಬಾಸ್​ ನಿರೂಪಕನ ಸ್ಥಾನಕ್ಕೆ ವಿದಾಯ ಘೋಷಿಸಿದ್ದಾರೆ.

ಬಿಗ್​ ಬಾಸ್​ ಕನ್ನಡ ಸೀಸನ್‌ 11 ನನ್ನ ಅಂತಿಮ ನಿರೂಪಣೆ ಎಂದು ಸುದೀಪ್ ಅಧಿಕೃತವಾಗಿ ಘೋಷಿಸಿದ್ದಾರೆ. 10 ವರ್ಷ ಪೂರೈಸಿ 11 ನೇ ವರ್ಷಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್‌ ಕಾರ್ಯಕ್ರಮವನ್ನು ಇಷ್ಟು ವರ್ಷ ನಡೆಸಿ ಕೊಟ್ಟ ಸುದೀಪ್ ಈಗ ಏಕಾ ಏಕಿ ಅಧಿಕೃತವಾಗಿ ಘೋಷಣೆ ಮಾಡಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ನನಗೆ ಮತ್ತು ಕಾರ್ಯಕ್ರಮಕ್ಕೆ ತೋರಿದ ಪ್ರೀತಿಯ ಬಗ್ಗೆ ಟಿವಿಆರ್ (ಸಂಖ್ಯೆ)ಯಲ್ಲಿ ಕಾಣುತ್ತಿದೆ. ಈ 10 ಪ್ಲಸ್​ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಉತ್ತಮವಾಗಿತ್ತು. ನಾನು ಈಗ ಬೇರೆ ಕಡೆಗೆ ನನ್ನ ನಡೆಯನ್ನು ಮುಂದುವರಿಸಲು ಇದು ಸಮಯವಾಗಿದೆ. ಇದು BBK ಗೆ ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಮತ್ತು ನನ್ನ ನಿರ್ಧಾರವನ್ನು ನನ್ನ ಕಲರ್ಸ್ ಮತ್ತು ಇಷ್ಟು ವರ್ಷಗಳಿಂದ ಬಿಗ್‌ಬಾಸ್ ​​ಅನ್ನು ಅನುಸರಿಸಿದ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಂಬುತ್ತೇನೆ.

ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ, ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ. ಇದಕ್ಕಾಗಿ ಎಲ್ಲರಿಗೂ ಧನ್ಯವಾದಗಳು, ಲವ್ ಮತ್ತು ಹಗ್‌ ಎಂದು ಟ್ವೀಟ್‌ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular