Saturday, September 26, 2026
Homeರಾಜ್ಯಬೆಂಗಳೂರು : ಕಸ್ತೂರಿ ಟಿವಿ ಮೂಲಕ ಪರಿಚಿತರಾಗಿದ್ದ ಹಿರಿಯ ಪತ್ರಕರ್ತ ಟಿವಿ 5 ಇನ್‌ಪುಟ್‌ ಚೀಫ್‌...

ಬೆಂಗಳೂರು : ಕಸ್ತೂರಿ ಟಿವಿ ಮೂಲಕ ಪರಿಚಿತರಾಗಿದ್ದ ಹಿರಿಯ ಪತ್ರಕರ್ತ ಟಿವಿ 5 ಇನ್‌ಪುಟ್‌ ಚೀಫ್‌ ಕ್ರೈಂ ಗಣೇಶ್‌ ಇನ್ನಿಲ್ಲ.

ಬೆಂಗಳೂರು : ಕಳೆದ 20 ವರ್ಷಗಳಿಂದ ಕನ್ನಡ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದ ಹಿರಿಯ ಪತ್ರಕರ್ತ ಕ್ರೈಂ ಗಣೇಶ್‌ ಇಂದು ಮೃತಪಟ್ಟಿದ್ದಾರೆ. ಅವರು ಪತ್ನಿ ಪಾರ್ವತಮ್ಮ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು,ಕಸ್ತೂರಿ, ನ್ಯೂಸ್‌‍ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್‌ ಅವರು ಪ್ರಸ್ತುತ ಟಿವಿ 5ನಲ್ಲಿ ಇನ್‌ಪುಟ್‌ ಚೀಫ್‌ ಅಗಿ ಸೇವೆ ಸಲ್ಲಿಸುತ್ತಿದ್ದರು.

ಅಪರಾಧ ಜಗತ್ತಿನ ಸುದ್ದಿಯನ್ನು ರೋಚಕವಾಗಿ ವರದಿ ಮಾಡುತ್ತಿದ್ದ ಗಣೇಶ್ ಜಿ. ಯುವ ಪತ್ರಕರ್ತರಿಗೆ ಪ್ರೀತಿಯ ಮಾತು ಹಾಗೂ ಪ್ರೋತ್ಸಾಹ ನೀಡುತ್ತಿದ್ದರು.ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ ಹಲವು ದಿನಗಳಿಂದ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು ನಗರದ ಜೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ನಿಷ್ಠಾವಂತ ಪತ್ರಕರ್ತರಾಗಿದ್ದ ಗಣೇಶ್ ಜಿ. ರವರಿಗೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್‌‍ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಕಂಬನಿ ಮಿಡಿದಿದೆ. ಹಲವಾರು ಗಣ್ಯರು, ಹಿರಿಯ ಪೊಲೀಸ್‌‍ ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular