ಮೈಸೂರು : ಮೂಡ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ FIR ದಾಖಲಾದ ಮೇಲೆ ಮೈಸೂರು ಲೋಕಾಯುಕ್ತ ತನಿಖೆ ನಡೆಸಲಾಗುತ್ತಿತ್ತು . ಈ ಬೆಳವಣಿಗೆಯ ಮಧ್ಯೆ ಸಿಎಂ ಪತ್ನಿ ಪಾರ್ವತಿ ಅವರು ಬಹಿರಂಗ ಪತ್ರ ಬರೆದು ಮುಡಾಗೆ ಸಂಬಂಧಿಸಿದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದರು .ಮೈಸೂರಿನ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ಪಡೆದ 14 ನಿವೇಶನಗಳನ್ನು ಹಿಂದಿರುಗಿಸುವುದಾಗಿ ಸಿಎಂ ಪತ್ನಿ ಪಾರ್ವತಿ ಅವರು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದರು. ಪತಿ ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಆಗುತ್ತಿರುವ ಸಂಕಷ್ಟವನ್ನು ನೋಡಲಾಗದೇ ಪತ್ನಿ ಈ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದಿತ್ತು ಆದರೆ ಇದೀಗ ಮುಡಾ ಸುಪರ್ದಿಗೆ ಸೇರಿದ 14 ಸೈಟ್ ಗಳು ಮೂರು ದಿನಗಳ ಹಿಂದೆ ವಾಪಸ್ಸು ನೀಡಿದ್ದ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ಸೈಟುಗಳನ್ನು ಅಧಿಕೃತವಾಗಿ ಇಂದು ಮುಡಾ ತೆಕ್ಕೆಗೆ ವರ್ಗಾಹಿಸಿದ್ದು ನಡೆಯಬೇಕಿದ್ದ ಸಂಪೂರ್ಣ ನೋಂದಣಿ ಕಾರ್ಯ ಮುಕ್ತಾಯಗೊಳಿಸಿದ್ದಾರೆ.
ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 14 ನಿವೇಶನ ಸಿಎಂ ಪತ್ನಿ ಪಾರ್ವತಿ ವಾಪಸ್ ನೀಡಿದ್ದು ಈ ಸಂಬಂಧ 1-10-2024 ರಂದು ಖಾಸಗಿ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು 3-10-2024 ರಂದು 14 ನಿವೇಶನಗಳ ಕ್ಯಾನ್ಸಲೇಷನ್ ಡೀಡ್ ಮುಖಾಂತರ ಪ್ರತಿ ನಿವೇಶನಕ್ಕೆ 1000 ರೂ ಗಳ ಕನ್ಸಡ್ರೇಷನ್ ಮೊತ್ತ ತೋರಿಸಿ ರದ್ದತಿಮಾಡಿ ಸಿಎಂ ಪತ್ನಿ ಪಾರ್ವತಿಯಿಂದ ಮುಡಾ ಸೆಕ್ರೆಟರಿ ಹೆಸರಿಗೆ ನೋಂದಣಿ ನೋಂದಾಯಿಸಿಕೊಡಲಾಗಿದೆ. ಈ ಬಗ್ಗೆ ಮುಡಾಸಬ್ ರಿಜಿಸ್ಟರ್ ಕಚೇರಿಯಲ್ಲಿ ನೋಂದಣಿಸಿ ಶಾರದಾದೇವಿ ನಗರ ನಿವಾಸದಲ್ಲಿ ಖಾಸಗಿ ನೋಂದಣಿ ಮಾಡಿಕೊಂಡು ಫೋಟೋ ಹಾಗು ದಾಖಲೆಗಳನ್ನ ಪಡೆದುಕೊಳ್ಳಲಾದೆ. ಒಟ್ಟಿನಲ್ಲಿ ಮುಡಾ ಹಗರಣ ಸಿದ್ದರಾಮಯ್ಯ ರವರ ರಾಜಕೀಯ ಇಕ್ಕಟ್ಟಿಗೂ ಸಿಲುಕಿದ್ದು ಇದೀಗ ಕೊಂಚ ನಿರಾಳವಾದಂತೆ ಕಾಣುತ್ತಿದೆ.


