Thursday, November 6, 2025
Flats for sale
Homeರಾಜ್ಯಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ : ಚುನಾಯಿತ ಸರ್ಕಾರಗಳನ್ನ ಉಳಿಸುವ...

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ : ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು : ನಾಡೋಜ ಹಂಪಾ ನಾಗರಾಜಯ್ಯ..!

ಮೈಸೂರು : ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾಗೆ ಚಾಲನೆ ನೀಡಿದ್ದಾರೆ.

ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ನಾಗರಾಜಯ್ಯ ಹೇಳಿದರು. ಸರ್ಕಾರ ಅಸ್ಥಿರತೆ ಮಾಡಬೇಡಿ ಎಂಬ ಕಿವಿಮಾತು ಹೇಳಿದ್ದಾರೆ. ಸರ್ಕಾರಗಳನ್ನ ಉರುಳಿಸುವ ದುರಾಲೋಚನೆ ಬರದಂತೆ ತಡೆಯಬೇಕು ಚುನಾಯಿತ ಸರ್ಕಾರಗಳನ್ನ ಉಳಿಸುವ ಚಿಂತನೆ ಆಗಬೇಕು ಲೋಕಾಂಬಿಕೆಯೂ ಅಂತಹ ಚಿಂತನೆ ಮೂಡಿಸಲಿ ಕೆಡವುದು ಸುಲಭ, ಕಟ್ಟುವುದು ಕಷ್ಟ ಮೊದಲೇ ದೊಡ್ಡ ಹೊರೆಗಳಿಂದ ಶ್ರೀಸಾಮಾನ್ಯರು ಬಳಲಿ ಬಸವಳಿದಿದ್ದಾರೆ ಪುನಃ ನಡೆಯುವ ಚುನಾವಣೆಗಳು ದೊಡ್ಡ ಹೊರೆಯಾಗಲಿವೆ ಜನರಿಗೆ ಇನ್ನಷ್ಟು ಭಾರ ಹೇರಿದರೆ ಕುಸಿದುಬಿಡುತ್ತಾನೆ ಯಾವ ಪಕ್ಷವೂ ಅಧಿಕಾರದಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ ಎಂದರು. ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿಃ ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಬಹುದು ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷ ಸಜ್ಜಾಗಬಹುದು ಎಂಬ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹಂಪ ನಾಗರಾಜಯ್ಯ ಹೆಂಡತಿ ದಿ. ಕಮಲಾ‌ ಹಂಪನಾ ಅವರಿಗೆ ನಮನ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ, 88 ವರ್ಷದ ಧೀರ್ಘ ಜೀವನದ ನೆನಪು ಮಾಡಿಕೊಂಡ ಹಂಪನಾ ಭಾವುಕರಾದರು.71 ವರ್ಷದ ಸ್ನೇಹದ ಸುಖ ನೀಡಿದೆ. 63 ವರ್ಷ ಮಡದಿಯಾಗಿ ಜೊತೆಯಾಗಿದ್ದೆ. ಆರು ವರ್ಷಗಳ ಕಾಲ ಸಹಪಾಠಿಯಾಗಿದ್ದೆ. ನಿನ್ನ ದಿವ್ಯ ನೆನಪಿಗೆ ಈ ಗೌರವ ಸಮರ್ಪಣೆ ಎಂದು ನಾಗರಾಜಯ್ಯ ಭಾವುಕರಾಗಿ ನೆನೆದರು.

ದಸರಾ ಚಾಲನೆಗೂ ಮೊದಲು ನಾಡಿನ ಅಧಿದೇವತೆಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಬೆಳಗ್ಗೆಯಿಂದ ಎಲ್ಲ ಕೆಲಸಗಳನ್ನು ಪೂರ್ಣ ಮಾಡಿದ್ದೇವೆ. ತಾಯಿ ಹಂಸವಾಹಿನಿ ಅಲಂಕಾರದಲ್ಲಿ ದೇವಿ ದರ್ಶನವಾಗಿದೆ. ನವರಾತ್ರಿಯ ಮೊದಲ‌ ದಿನವಾದ ಇಂದು ಚಾಮುಂಡಿದೇವಿಗೆ ವಿಶೇಷ ಪೂಜೆಗಳನ್ನ ಮಾಡಲಾಗಿದೆ. 9 ದಿನಗಳು ದೇವಿ ವಿಶೇಷವಾಗಿ ಕಾಣಿಸಿಕೊಳ್ಳಲಿದ್ದಾಳೆ ಎಂದು ದೇವಸ್ಥಾನದ ಅರ್ಚಕ ಡಾ.ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.

ನಾಡ ಅದಿ ದೇವತೆ ಚಾಮುಂಡೇಶ್ವರಿ ಸನ್ನಿದಾನ ಚಾಮುಂಡಿ ಬೆಟ್ಟದಲ್ಲಿ ಕಾರ್ಯಕ್ರಮ ನಡೆದಿದ್ದು ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ವೆಂಕಟೇಶ್, ಹೆಚ್ ಕೆ ಪಾಟೀಲ್, ಶಿವರಾಜ್ ತಂಗಡಗಿ, ಶಾಸಕರಾದ ಜಿಟಿ ದೇವೇಗೌಡ, ತನ್ವಿರ್ ಸೇಠ್, ದರ್ಶನ್ ದೃವನಾರಾಯಣ್, ಅನಿಲ್ ಚಿಕ್ಕಮಾಧು, ಕೆ ಹರೀಶ್ ಗೌಡ, ರವಿಶಂಕರ್, ಎ ಆರ್ ಕೃಷ್ಣಮೂರ್ತಿ, ಶ್ರೀವತ್ಸ, ರಮೇಶ್ ಬಂಡಿ ಸಿದ್ದೇಗೌಡ, ಡಾ ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಮುಡಾ ಅಧ್ಯಕ್ಷ ಮರೀಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷೆ ಪುಷ್ಪ ಅಮರನಾಥ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ಡಿಸಿ ಲಕ್ಷ್ಮಿಕಾಂತ ರೆಡ್ಡಿ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular