ಶಿವಮೊಗ್ಗ : ಜಿಲ್ಲೆ ಶಿರಾಳಕೊಪ್ಪದಿಂದ ಕ್ಯಾಂಟರ್ ಮೂಲಕ ಮಂಗಳೂರಿಗೆ ಸಾಗಿಸುತ್ತಿದ್ದ 30 ಕ್ಕೂ ಹೆಚ್ಚು ಕ್ಯಾಂಟರ್ ನಲ್ಲಿ ಗೋವುಗಳನ್ನ ಸಾಗಿಸುವ ವೇಳೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಬಳಿ ದಾಳಿ ನಡೆಸಿದ್ದು ಒಂದೇ ವಾಹನದಲ್ಲಿ 30 ಕ್ಕೂ ಹೆಚ್ಚು ಗೋವುಗಳ ಸಾಗಾಟಮಾಡುತ್ತಿದ್ದಾರೆಂದು ತಿಳಿದಿದೆ .ಎಮ್ಮೆ, ಎತ್ತು, ಹೋರಿ ಸೇರಿದಂತೆ 30 ಕ್ಕೂ ಹೆಚ್ಚು ಗೋವುಗಳಿದ್ದು ಕ್ಯಾಂಟರ್ ಚಾಲಕನನ್ನ ಪೊಲೀಸರಿಗೆ ಭಜರಂಗದಳ ಕಾರ್ಯಕರ್ತರು ಒಪ್ಪಿಸಿದ್ದಾರೆ.
ಶಿವಮೊಗ್ಗ ಜಯನಗರ ಪೊಲೀಸ್ ಠಾಣೆ ಎದುರು ಭಜರಂಗದಳ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದು ರಕ್ಷಣೆ ಮಾಡಿದ ಗೋವುಗಳನ್ನ ಮಹಾವೀರ ಗೋಶಾಲೆಗೆ ರವಾನಿಸಿದ್ದಾರೆ.