ಮಂಗಳೂರು ; ತಲಪಾಡಿ ರೂಟ್ ಗೆ ಚಲಿಸುವ ಎರಡು ಬಸ್ ಸಿಬ್ಬಂದಿ ಕೈ ಕೈ ಮಿಲಾಯಿಸಿಕೊಂಡ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪುಡಿ ರೌಡಿಗಳಂತೆ ಈ ಇಬ್ಬರು ಒಬ್ಬರ ಮೇಲೆ ಒಬ್ಬರು ಹಲ್ಲೆ ಮಾಡಿದ್ದು, ಬಸ್ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿದ್ದಾರೆ. ಇವರ ಈ ಗಲಾಟೆಯಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿದ್ದು, ಈ ವೇಳೆ ಕಾರಿನಲ್ಲಿದ್ದವರೊಬ್ಬರು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ತೊಕ್ಕೋಟು ಬಳಿ ನಡೆದಿದೆ.ಈ ವಿಡಿಯೋ ವೀಕ್ಷಿಸಿದ ಹಲವಾರು ಜನರು ಬಸ್ ಸಿಬ್ಬಂದಿಯ ವರ್ತನೆಯನ್ನು ಟೀಕಿಸಿದ್ದಾರೆ. ಇತ್ತೀಚೆಗಷ್ಟೇ ಮಾನವೀಯತೆಗಾಗಿ ಗೌರವ ಪಡೆದುಕೊಂಡ ಸಿಬ್ಬಂದಿ ನಡುವೆ ಇಂತವರೇ ಕೆಟ್ಟ ಹೆಸರು ತರುತ್ತಿದ್ದಾರೆ ಅಂತ ಟೀಕೆಗಳು ವ್ಯಕ್ತವಾಗಿದೆ. ಇದು ಮತ್ತೆ ಟೈಮಿಂಗ್ ವಿಚಾರಕ್ಕೆ ನಡೆದಿರುವ ಗಲಾಟೆಯಾಗಿದ್ದು, ಟೈಮಿಂಗ್ ಹೆಸರಿನಲ್ಲಿ ಪ್ರಯಾಣಿಕರಿಗೆ ಕಿರುಕುಳ ಆಗ್ತಾ ಇದೆ ಅನ್ನೋ ಆರೋಪ ಕೂಡಾ ಕೇಳಿ ಬಂದಿದೆ. ಈ ಇಬ್ಬರು ನಿರ್ವಾಹಕರು ಬಸ್ಸಿನಲ್ಲಿ ಮಹಿಳೆಯರಿಗೆ ದರ್ಪದಿಂದ ಮಾತನಾಡುತ್ತಿದ್ದು ಹಲವರು ಈ ವಿಡಿಯೋ ನೋಡಿ ಅಳಲು ತೋಡಿಗೊಂಡಿದ್ದಾರೆ.