ಉಡುಪಿ : ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು,ಜತೆಗೆ, ಎಚ್ಚರಿಕೆ ನೀಡುವಂತೆಯೂ ತಿಳಿಸಿದ ಘಟನೆ ನಡೆದಿದೆ.
ಈಕೆಗೆ ಮದುವೆಯಾಗಿದ್ದು ಗಂಡನೇ ಈಕೆಯ ಫೋಟೋಗ್ರಾಫರ್ ಆಗಿದ್ದಾನೆ. ಇನ್ಟಾದಲ್ಲಿ ಆಕೆಗೆ 7ಲಕ್ಷಕ್ಕೂ ಅಧಿಕ ಅನುಯಾಯಿಗಳಿದ್ದಾರೆ. ಇದೆಂಥಾ ಸಂಸ್ಕೃತಿ? ಪರಶುರಾಮ ಸೃಷ್ಟಿಯ ನಾಡಿನಲ್ಲಿ ಈಕೆ ಮಾಡಿದ್ದು ಸರಿಯೇ? ಬೀಚ್ಗೆ ಬರುವ ಪ್ರವಾಸಿಗರೇ, ಆಧುನಿಕತೆ ನೆಪದಲ್ಲಿ ಸಂಸ್ಕೃತಿಯನ್ನು ಮರೆಯದಿರಿ. ಬಿಕಿನಿ ಸಂಸ್ಕೃತಿಗೆ ಉಡುಪಿಯಲ್ಲಿ ಅವಕಾಶ ಇಲ್ಲ’ ಎಂದು ‘ಹಿಂದೂ’ ಹೆಸರಿನ ಖಾತೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಸಂಭಾವ್ಯ ಸಮಸ್ಯೆಯ ಬಗ್ಗೆ ಅರಿತುಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ ಬಟ್ಟೆ ಬದಲಾಯಿಸುವಂತೆ ಸೂಚಿಸಿದ್ದಾರೆ .ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಯುವತಿ, ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖ್ಯಾತಿ ಶ್ರೀ ಎಂಬಾಕೆ ಈ ಆರೋಪ ಮಾಡಿದ್ದು, ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳೀಯರು ಪೊಲೀಸರಿಂದ ಅಡ್ಡಿಪಡಿಸಿದ್ದಾರೆಂಬುದು ತಾನು ಬಿಕಿನಿಯಲ್ಲಿ ತೆಗೆದಿರುವ ಫೋಟೋಗಳನ್ನು ಹಾಕಿ ಆರೋಪಿಸಿದ್ದಾಳೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರು? ಬೀಚ್ ಸಾರ್ವಜನಿಕ ಪ್ರದೇಶ ಫೋಟೋಶೂಟ್ ಮಾಡಿಕೊಂಡರೆ ತಪ್ಪೇನು? ಎಂದು ಯುವರಿ ಖ್ಯಾತಿ ಶ್ರೀ ಪ್ರಶ್ನೆ ಮಾಡಿದ್ದಾಳೆ. ಬಿಕಿನಿ ಹಾಕಿಕೊಂಡು ಫೋಟೋಶೂಟ್ ಮಾಡುವುದು ಕಾನೂನು ಉಲ್ಲಂಘನೆಯೇ? ಜಾಲತಾಣದಲ್ಲಿ ಉಡುಪಿ ಪೊಲೀಸರಿಗೆ ಯುವತಿ ಪ್ರಶ್ನೆ ಹಾಕಿದ್ದಾಳೆ.